www.bantwalnews.com ಸಂಪಾದಕ: ಹರೀಶ ಮಾಂಬಾಡಿ
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಇದರ ದತ್ತು ಯೋಜನೆಯಡಿ ನಿರ್ಮಾಣಗೊಂಡಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭ ಜ.೫ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಅದ್ದೂರಿಯ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ಬೆಳಿಗ್ಗೆ ನಡೆಯಿತು.

ಶಾಲೆ ಲೋಕಾರ್ಪಣೆಯ ಅಂಗವಾಗಿ ದಡ್ಡಲಕಾಡು ಬಳಿ ಹಾಕಲಾಗಿರುವ ಪೆನ್ಸಿಲ್ ಮತ್ತು ಕೈವಾರದ ಸ್ವಾಗತ ದ್ವಾರ ಜನರ ಗಮನ ಸೆಳೆಯುತ್ತಿದೆ. ಈ ಭಾಗದಿಂದ ಹೋಗುವ ಜನರು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು.
ಮಣಿಹಳ್ಳ ಜಂಕ್ಷನ್ ಬಳಿ ಕೇಲ್ದೋಡಿಗುತ್ತು ಕೋಟಿ ಪೂಜಾರಿ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಶಾಲಾ ಮಕ್ಕಳು, ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಮೆರವಣಿಯಲ್ಲಿ ಹೆಜ್ಜೆಹಾಕಿದರು.
ಕೇರಳಚೆಂಡೆ ನಿನಾದ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ವಿದ್ಯಾರ್ಥಿಗಳ ಪೋಷಕರು, ಶಾಲಾಭಿಮಾನಿಗಳು ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಹೊರೆಕಾಣಿಕೆಗೆ ಸಮರ್ಪಿಸಿದರು. ಈ ಸಂದರ್ಭ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಕರೆಂಕಿ ಕ್ಷೇತ್ರದ ಪ್ರಧಾನ ಅರ್ಚನ ಗುರುರಾಜ್ ಭಟ್ ಪ್ರಮುಖರಾದ ಜಿ.ಆನಂದ, ಪೂವಪ್ಪ ಮೆಂಡನ್, ಪುರುಷೋತ್ತಮ ಅಂಚನ್, ನವೀನ್ ಸೇಸಗುರಿ, ವಿನೋದ್ ಕರೆಂಕಿ, ವಿಠಲ ಡಿ., ವಸಂತಗೌಡ ಹಳೆಗೇಟು ಮೊದಲಾದವರು ಹಾಜರಿದ್ದರು.
Be the first to comment on "ದಡ್ಡಲಕಾಡು ಶಾಲೆಗೆ ಸಾರ್ವಜನಿಕರಿಂದ ಹೊರೆಕಾಣಿಕೆ ಮೆರವಣಿಗೆ"