ಕಪ್ಪು ಬಿಳುಪು ಫೊಟೋಗಳ ‘ಸಂಗೀತಂ’ ಸಂಗಮ

www.bantwalnews.com ಸಂಪಾದಕ: ಹರೀಶ ಮಾಂಬಾಡಿ

ಡಾ.ಪದ್ಮಾ ಸುಬ್ರಹ್ಮಣ್ಯಂ, ಸಿ.ವಿ.ಚಂದ್ರಶೇಖರ್, ರಾಧಿಕಾ ಶೆಟ್ಟಿ, ಧನಂಜಯನ್ಸ್, ಡಾ.ಸೌಂದರ್ಯ ಶ್ರೀವತ್ಸ, ಪಾರ್ಶ್ವನಾಥ ಉಪಾಧ್ಯಾಯ, ಮೀನಾಕ್ಷಿ ಶ್ರೀನಿವಾಸನ್, ಡಾ.ಸರೋಜ ವೈದ್ಯನಾಥನ್, ಶೀ ಲಕ್ಷ್ಮೀ ಗೋವರ್ಧನ್, ರಮಾ ವೈದ್ಯನಾಥನ್, ಪಿ.ಉನ್ನಿಕೃಷ್ಣನ್, ಟಿ.ಎಂ.ಕೃಷ್ಣ, ಶಂಕರ್ ಮಹಾದೇವನ್ ಚಿತ್ರಗಳೆಲ್ಲ ಒಟ್ಟಾಗಿ ಸಿಕ್ಕರೆ ಹೇಗಿರುತ್ತದೆ ?

 

ಈ ಕಲಾವಿದರೂ ಸೇರಿದಂತೆ ಸಾಂಸ್ಕೃತಿಕ ಲೋಕದ ಶ್ರೇಷ್ಠ ಕಲಾವಿದರು ಪ್ರದರ್ಶನ ನೀಡುತ್ತಿರುವ ಸಂದರ್ಭ ಪತ್ರಕರ್ತ, ಛಾಯಾಚಿತ್ರ ಕಲಾವಿದ ಶೇಣಿ ಮುರಳಿ ಕ್ಯಾಮರಾದಲ್ಲಿ ಸೆರೆಹಿಡಿದ ಚಿತ್ರಗಳ ಪ್ರದರ್ಶನದಲ್ಲಿ ಇವರೆಲ್ಲರನ್ನೂ ನೋಡುವ ಅವಕಾಶ ಕಲಾರಸಿಕರಿಗೆ ವರ್ಷಾಂತ್ಯದ ಶನಿವಾರದಲ್ಲಿ ನಡೆದ ಫೊಟೋ ಎಕ್ಸಿಬಿಷನ್ ನಲ್ಲಿ ಒದಗಿತು.

ವಿಶೇಷವೆಂದರೆ ಇವೆಲ್ಲವೂ ಕಪ್ಪು-ಬಿಳುಪು ಚಿತ್ರಗಳು. ಶೇಣಿ ಮುರಳಿ ಅವರಿಗೂ ಕಪ್ಪು ಬಿಳುಪು ಚಿತ್ರಗಳಲ್ಲಿ ಆಸಕ್ತಿ.  ಹೀಗಾಗಿಯೇ ಅವರು ಶನಿವಾರ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ನಡೆಸಿದ ಕಪ್ಪು ಬಿಳುಪು ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನ ಸಂಗೀತಂನಲ್ಲಿ ಸಂಗೀತ, ನೃತ್ಯ ಪರಿಣತರ ವಿವಿಧ ಭಾವ ಭಂಗಿಗಳು ಪ್ರಸ್ತುತಗೊಂಡವು.

ಬಿಬಿಸಿ ವನ್ಯಜೀವಿ -ಫೊಟೋಗ್ರಫಿ-2016 ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಛಾಯಾಚಿತ್ರ ಕಲಾವಿದ ಗಣೇಶ್ ಎಚ್.ಶಂಕರ್ ಪ್ರದರ್ಶನ ಉದ್ಘಾಟಿಸಿ, ಶುಭ ಹಾರೈಸಿದರು. ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ನರೇಂದ್ರ ಎಲ್.ನಾಯಕ್ ಮುಖ್ಯ ಅತಿಥಿಯಾಗಿದ್ದರು. ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್, ಹಿರಿಯ ಚಿತ್ರ ಕಲಾವಿದ ಕೋಟಿ ಪ್ರಸಾದ್ ಆಳ್ವ, ವಿಜಯವಾಣಿ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಸುರೇಂದ್ರ ಎಸ್.ವಾಗ್ಳೆ, ಛಾಯಾಚಿತ್ರ ಕಲಾವಿದ ಮಹೇಶ್ ತೇಜಸ್ವಿ ಅತಿಥಿಗಳಾಗಿದ್ದರು.

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕಪ್ಪು ಬಿಳುಪು ಫೊಟೋಗಳ ‘ಸಂಗೀತಂ’ ಸಂಗಮ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*