- ಶಾಸಕ ರಾಜೇಶ್ ನಾಯ್ಕ್ ಪ್ರಶ್ನೆಗೆ ವಿಧಾನಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ
ಕೇಂದ್ರ ಸರಕಾರದ 14ನೇ ಹಣಕಾಸು ಆಯೋಗದಡಿ ದಕ್ಷಿಣಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತ್‌ಗಳಿಗೆ 2016-17, 17-18, 18-19ನೇ ಅವಧಿಯಲ್ಲಿ ಒಟ್ಟು 150 ಕೋಟಿ ರೂ ಬಿಡುಗಡೆಯಾಗಿದೆ. ಇದರಲ್ಲಿ 29 ಕೋಟಿ ರೂ ವಿದ್ಯುತ್ ಬಿಲ್ ಪಾವತಿಗೆ ಬಳಕೆಯಾಗಿದೆ.
ಈ ವಿಷಯವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ವಿಧಾನಸಭಾಧಿವೇಶನದಲ್ಲಿ ಕೇಳಿದ ಸಂದರ್ಭ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಒಟ್ಟು 150,24,53,995 ರೂ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ 29,48,07,514 ರೂಗ್ರಾಮ ಪಂಚಾಯತ್‌ಗಳ ವಿದ್ಯುತ್ ಬಿಲ್ಲು ಪಾವತಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
Be the first to comment on "ಜಿಲ್ಲೆಯ ಗ್ರಾಪಂಗಳಿಗೆ ಕೇಂದ್ರದಿಂದ 150 ಕೋಟಿ ರೂ, ಅದರಲ್ಲಿ 29 ಕೋಟಿ ಕರೆಂಟ್ ಬಿಲ್ ಪಾವತಿ"