ಮಾದಕದ್ರವ್ಯ ವ್ಯಸನದ ಕುರಿತು ಸಾರ್ವಜನಿಕರಿಗೆ ಎಚ್ಚರಿಸಿದ ಎನ್ನೆಸ್ಸೆಸ್ ವಿದ್ಯಾರ್ಥಿಗಳು

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಶಿಬಿರಾರ್ಥಿಗಳಿಂದ ನಡೆದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು.

ಜಾಹೀರಾತು

ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜ ಮತ್ತು ವಿದ್ಯಾರ್ಥಿಗಳನ್ನು ಎಚ್ಚರಿಸುವ ಬೀದಿ ನಾಟಕ ವ್ಯಸನಮುಕ್ತ ವಿದ್ಯಾರ್ಥಿ ಶಕ್ತಿ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳು ಬೀಡಿ, ಸಿಗರೇಟು, ಗಾಂಜಾಗಳನ್ನು ಸೇವಿಸುವ ಮತ್ತು ಓದಿಗಿಂತ ಮೋಜು ಲೇಸು ಎನ್ನುತ್ತ ಮಜಾ ಮಾಡಬೇಕೆನ್ನುವ ದೃಶ್ಯದಲ್ಲಿ ಕಾಣುತ್ತಾರೆ. ಆಗ ಓರ್ವ ಗೆಳೆಯ ಅವರಿಗೆ ಬದುಕು ಇಷ್ಟೇ ಅಲ್ಲವೆಂದು ಬೋಽಸುತ್ತಾನೆ. ಬದುಕೆಂದರೆ ಬರಿ ಮೋಜಲ್ಲ.. ಗೆಳೆಯರ ಸಂಗದಿ ದುಶ್ಚಟ ಕಲಿತು ವ್ಯರ್ಥಗೊಳಿಸುವ ಹೊತ್ತಲ್ಲ.. ಎಂಬ ಕನ್ನಡ ಉಪನ್ಯಾಸಕಿ ಬರೆದ ಹಾಡಿನ ಮೂಲಕ ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ತಲುಪಿಸುತ್ತಾರೆ.

ತಂದೆ, ತಾಯಿಯರಿಂದ ಹಣ ಕಸಿದು, ದುಶ್ಚಟಗಳ ದಾಸನಾದ ವ್ಯಕ್ತಿ, ಕ್ಯಾನ್ಸರ್ ಇನ್ನಿತರ ಮಾರಕ ರೋಗಗಳಿಗೆ ಬಲಿಯಾಗುವುದು, ಆಗ ಅವನ ತಂದೆ ತಾಯಿ ವೈದ್ಯರ ಬಳಿಗೆ ತೆರಳಿ ಮಗನನ್ನು ಬದುಕುಳಿಸಲು ಬೇಡುವುದು, ವೈದ್ಯರು ಕೈಮೀರಿದ ಸನ್ನಿವೇಶ ಉಂಟಾಗುವುದು, ವೈದ್ಯರು ಹೆತ್ತವರಿಗೆ ಮಕ್ಕಳನ್ನು ದಾರಿ ತಪ್ಪದಂತೆ ಎಚ್ಚರಿಸುವುದು, ಕೇಳಿದಾಗಲೆಲ್ಲ ಹಣ ನೀಡುವುದು ತಪ್ಪು ಎನ್ನುವ ಸಂದೇಶವನ್ನು ನೀಡುವುದು ಸುಂದರವಾಗಿ ಮೂಡಿಬಂದಿದೆ. ಧೂಮಪಾನ ಕ್ಯಾನ್ಸರ್‌ಕಾರಕ, ವ್ಯಸನಗಳಿಗೆ ದಾಸ, ಮನೆಮಂದಿಗೆ ಮೋಸ, ಕುಡಿತದ ಫಲ ಕೈತುಂಬಾ ಸಾಲ, ಮದ್ಯಪಾನ ಬಿಡಿಸಿರಿ ಜೀವನವನ್ನು ಉಳಿಸಿರಿ, ಗಾಂಜಾ ಗಮ್ಮತ್ತು ಆರೋಗ್ಯಕ್ಕೆ ಆಪತ್ತು, ಕುಡಿತದ ಬಾಳು ನರಕದ ಗೋಳು, ವ್ಯಸನದ ಹಿಂದೆ ಹೋಗದಿರಿ ಮಸಣವ ಬೇಗ ಸೇರದಿರಿ, ಕೆಟ್ಟ ವ್ಯಸನಗಳಿಂದ ದೂರ ಬದುಕು ಮುತ್ತಿನ ಹಾರ ಎಂಬ ಘೋಷಣೆ ಮತ್ತು ದೇಹ ಹಿತ.. ದೇಶ ಹಿತ.. ದುಶ್ಚಟಮುಕ್ತ ಭಾರತ ಎಂಬ ಕರೆ ನೀಡುವುದರೊಂದಿಗೆ ನಾಟಕಕ್ಕೆ ತೆರೆ ಎಳೆಯಲಾಯಿತು.

ಹಾಸ್ಯಭರಿತ, ವ್ಯಂಗ್ಯ ಟಾಂಗ್‌ಗಳು, ದುಃಖಭರಿತ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕೆಲ ದೃಶ್ಯಗಳು ಕೆಲವರ ಕಣ್ಣಲ್ಲಿ ನೀರು ಬರಿಸಿತು ಮತ್ತು ಕೆಲವರು ವಿದ್ಯಾರ್ಥಿಗಳ ಬಳಿ ತೆರಳಿ ಅಭಿನಂದಿಸಿದರು. ಅಮಲೇರಿದ ವ್ಯಕ್ತಿಯೊಬ್ಬರು ನಾಟಕವಾಡಿದ ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಸನ್ನಿವೇಶವೂ ಸೃಷ್ಟಿಯಾಯಿತು.

ಜಾಹೀರಾತು

ಸಂತೋಷ್ ಮೂಡಬಿದಿರೆ ಮತ್ತು ಸಹಶಿಬಿರಾಽಕಾರಿ ಪ್ರವೀಣ್ ಪಿ. ನಿರ್ದೇಶಿಸಿದ್ದರು. ಗಂಗಾರತ್ನ ಮುಗುಳಿ ಅವರ ಸಾಹಿತ್ಯ, ಮುಖ್ಯ ಶಿಬಿರಾಧಿಕಾರಿ ಅಶೋಕ್ ಎಸ್. ಅವರ ಮಾರ್ಗದರ್ಶನವಿತ್ತು.

ವಿಟ್ಲ ಪ.ಪಂ.ಅಧ್ಯಕ್ಷ ಅರುಣ್ ಎಂ.ವಿಟ್ಲ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸಹಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಮಾದಕದ್ರವ್ಯ ವ್ಯಸನದ ಕುರಿತು ಸಾರ್ವಜನಿಕರಿಗೆ ಎಚ್ಚರಿಸಿದ ಎನ್ನೆಸ್ಸೆಸ್ ವಿದ್ಯಾರ್ಥಿಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*