ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ 30 ಬೆಂಚ್ ಡೆಸ್ಕ್ ಗಳನ್ನು ಮೂರು ಶಾಲೆಗಳಿಗೆ ಶಾಸಕ ರಾಜೇಶ್ ನಾಕ್ ಅವರು ಬಂಟ್ವಾಳ ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಬೆಂಜನಪದವು, ಚಂದಳಿಕೆಯ ಸರ್ಕಾರಿ ಶಾಲೆ ಮತ್ತು ಕಾವಳಪಡೂರಿನ ಪದವಿ ಪೂರ್ವಕಾಲೇಜಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಪೀಠೋಪಕರಣ ಮಂಜೂರಾಗಿತ್ತು.
ಶ್ರೀ.ಕ್ಷೇ.ಧ.ಗ್ರಾ.ಯೋ.(ರಿ)ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ, ಶ್ರೀ.ಕ್ಷೇ.ಧ.ಗ್ರಾ.ಯೋ.(ರಿ) ದಕ್ಷಿಣ ಕನ್ನಡಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ್ ಕೆ, ಬಿಇಒ ಎನ್. ಶಿವಪ್ರಕಾಶ್, ಶ್ರೀ.ಕ್ಷೇ.ಧ.ಗ್ರಾ.ಯೋ.(ರಿ) ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ್ .ಪಿ, ಬಂಟ್ವಾಳ ತಾಲೂಕಿನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪ್ರಕಾಶ ಕಾರಂತ ಕಾರಿಂಜದೇವಸ್ಥಾನದಆಡಳಿತ ಮೊಕ್ತೇಸರರಾದ ಜಿನರಾಜ್ ಅರಿಗ, ಬಂಟ್ವಾಳ ಪ್ರಗತಿ ಬಂಧು/ ಸ್ವ ಸಹಾಯ ಸಂಘದಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಸದಾನಂದ ಗೌಡ, ಬಂಟ್ವಾಳ ಬಿ.ಸಿ ರೋಡ್ ವಲಯದ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ರೋನಾಲ್ಡ್ ಡಿ ಸೋಜ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ಆನಂದ ಜಿ, ಶ್ರೀ.ಕ್ಷೇ.ಧ.ಗ್ರಾ.ಯೋ.(ರಿ)ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್, ಬಿ.ಸಿ ರೋಡ್ ವಲಯದ ಮೇಲ್ವಿಚಾರಕ ರಮೇಶ್ ಎಸ್, ಜೆ.ವಿ.ಕೆ ಸಮನ್ವಯಾಧಿಕಾರಿ ಸಪ್ನಾ ಆರ್ ಜೈನ್, ತಾಪಂ ಸದಸ್ಯ ಪ್ರಭಾಕರ ಪ್ರಭು, ಪುರಸಭಾ ಸದಸ್ಯ ಎ.ಗೋವಿಂದ ಪ್ರಬು, ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment on "ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸವಲತ್ತು ವಿತರಣೆ"