www.bantwalnews.com Report.
Editor: Harish Mambady
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಮುಸ್ಲಿಂ, ಹಿಂದುಗಳನ್ನು ಮತ್ತು ಹಿಂದುಗಳಲ್ಲಿ ಜಾತಿ ತಾರತಮ್ಯ ಮಾಡಿದರು. ಸ್ವಾತಂತ್ರ್ಯಾನಂತರವೂ ಅದನ್ನೇ ಮುಂದುವರಿಸಲಾಯಿತು. ರಾಷ್ಟ್ರೀಯತೆಯನ್ನು, ಭಾರತೀಯ ಸಂಸ್ಕೃತಿಯನ್ನು ಅದರ ಮೌಲ್ಯಗಳನ್ನು ಪ್ರತಿಪಾದಿಸುವವರನ್ನು ಕಂಡರೆ ದ್ವೇಷ. ಅದಕ್ಕಾಗಿಯೇ ಕಲ್ಲಡ್ಕದಲ್ಲಿ ಬಿಸಿಯೂಟ ಕೊಡುಗೆ ನಿಲ್ಲಿಸಿದರು ಎಂದು ಹಿರಿಯ ಲೇಖಕ, ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ ಹೇಳಿದರು.
ಶನಿವಾರ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಡಾ. ಭೈರಪ್ಪ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ವಿದ್ಯಾಸಂಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಭೈರಪ್ಪ ಬಾಷಣದ ಮುಖ್ಯಾಂಶಗಳು ಇವು.
- ಅಂದು ಬ್ರಿಟಿಷರು ಒಡೆದು ಆಳಿದರೆ, ಬಳಿಕದ ಸರಕಾರ ಅದನ್ನು ಮುಂದುವರಿಸಿತು.
- ಹೆಣ್ಣಿಗೆ ಗರಿಷ್ಠ ಗೌರವ, ಸ್ಥಾನಮಾನ ನೀಡಿದ್ದು ಹಿಂದು ಸಂಸ್ಕೃತಿ. ಈ ಪ್ರಪಂಚಕ್ಕೆ ಜನ್ಮನೀಡಿದ್ದು, ದೈತ್ಯಸಂಹಾರದ ನೇತೃತ್ವ ವಹಿಸಿದ್ದು, ದೇವತೆ.
- ವಂದೇ ಮಾತರಂ ಹಾಡು ಸ್ವಾತಂತ್ರ ಬರುವವರಗೆ ನಮ್ಮ ರಾಷ್ಟ್ರಗೀತೆಯಾಯಿತು.
- ಗಾಂಧೀಜಿಯ ಅಹಿಂಸೆಯಿಂದಷ್ಟೇ ಸ್ವಾತಂತ್ರ್ಯ ಬಂತು ಎನ್ನುವ ಕತೆ ಸೃಷ್ಟಿಸಲಾಗಿದೆ. ಆದರೆ ಬ್ರಿಟಿಷರು ಕೇವಲ ಅಹಿಂಸೆಯಿಂದಾಗಿ ಭಾರತವನ್ನು ಬಿಟ್ಟು ಹೋಗಿಲ್ಲ ಮುಂಬೈನ ನೌಕಾಪಡೆಯ ದಂಗೆಗೆ ಹೆದರಿ ಓಡಿದ್ದಾರೆ
- ವಂಶ ಪಾರಂಪರ್ಯದ ರಾಜಕಾರಣವೇ ಈಗ ಮುಂದುವರಿದಿದೆ
- ನೈತಿಕ ಭಯ ನಮ್ಮೊಳಗಿರ ಬೇಕು ಪಠ್ಯೇತರ ಚಟುವಟಿಕೆಗಳ ಮೂಲಕ ನೀತಿ ಬೆಳೆಸಬೇಕು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಸ್ವಾಗತಿಸಿದರು. ಶಾಲಾ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವೇದಿಕೆಯಲ್ಲಿದ್ದರು. ಉಪನ್ಯಾಸಕ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ನಿರೂಪಿಸಿ ವಂದಿಸಿದರು.
Be the first to comment on "ಸ್ವಾತಂತ್ರ್ಯ ಬಂದ ಮೇಲೂ ಭಾರತೀಯ ಸಂಸ್ಕೃತಿ ಪ್ರತಿಪಾದಕರ ಕಂಡರೆ ದ್ವೇಷ ನಿಂತಿಲ್ಲ: ಡಾ. ಎಸ್.ಎಲ್. ಭೈರಪ್ಪ"