SPOTLIGHT by www.bantwalnews.com
Editor: Harish Mambady
Click for Video:
ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟ್ವಾಳ ನಾರಾಯಣಗುರು ವೃತ್ತದಿಂದ ಮುಂದೆ ಚಾರ್ಮಾಡಿ ಕಡೆ ಸಾಗುವಾಗ ಹುಷಾರು. ಅಲ್ಲಲ್ಲಿ ಹೊಂಡಗಳಿವೆ ಎಚ್ಚರಿಕೆ.
ಈಗಾಗಲೇ ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ರಸ್ತೆ ಅಭವೃದ್ಧಿಗೆ ಅನುದಾನ ಮೀಸಲಿಟ್ಟಾಗಿದೆ. ಆದರೆ ಕಾಮಗಾರಿ ಆರಂಭಗೊಳ್ಳಲು ಮುಹೂರ್ತ ನಿಗದಿಯಾಗಿಲ್ಲ. ಈ ಮಧ್ಯೆ ಬಂಟ್ವಾಳ ಪೇಟೆ, ಬೆಳ್ತಂಗಡಿ, ಬಿ.ಸಿ.ರೋಡ್, ಮೂಡುಬಿದಿರೆ ಕಡೆಗಳಿಗೆ ವಾಹನಗಳು ತಿರುಗುವ ಜಂಕ್ಷನ್ ಆಗಿರುವ ತುಂಬ್ಯ ಜಂಕ್ಷನ್ ಅತ್ಯಂತ ಅಪಾಯದ ಸ್ಥಿತಿಯಲ್ಲಿದೆ. ಇಲ್ಲಿ ವಾಹನಗಳು ಸಂಚರಿಸುವಾಗ ಹೊಂಡ ತಪ್ಪಿಸಲು ಹೊರಟರೆ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯಬೇಕು. ವಾಹನದಟ್ಟಣೆ ಹೆಚ್ಚಾದರೂ ರಸ್ತೆ ಅಗಲಗೊಳ್ಳದೇ ಇರುವುದು, ಇರುವ ರಸ್ತೆ ಹೊಂಡಮಯವಾಗಿರುವ ಕಾರಣ ವಾಹನ ಸಂಚಾರಕ್ಕೆ ಈ ಭಾಗದಲ್ಲಿ ತೀವ್ರ ತೊಡಕುಂಟಾಗುತ್ತಿದೆ.
ಏನು ಸಮಸ್ಯೆ:
ಈ ಭಾಗದಲ್ಲಿ ರಸ್ತೆ ಹೊಂಡದ ಸಮಸ್ಯೆಯಷ್ಟೇ ಅಲ್ಲ, ಬಸ್ ಗಳು ರಸ್ತೆಯಲ್ಲೇ ಪಾರ್ಕಿಂಗ್ ಮಾಡುವ ಕಾರಣ ಟ್ರಾಫಿಕ್ ಜಾಮ್ ಗೂ ಕಾರಣವಾಗುತ್ತಿದೆ. ಹೊಂಡಮುಕ್ತ ಮತ್ತು ಅಗಲವಾದ ರಸ್ತೆ ನಿರ್ಮಾಣ ಮತ್ತು ಸುಗಮ ಟ್ರಾಫಿಕ್ ಸಂಚಾರಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಪಕ್ಕದಲ್ಲೇ ಬಸ್ ತಂಗುದಾಣವಿದ್ದರೂ ಅಲ್ಲಿ ಬಸ್ಸುಗಳು ನಿಲ್ಲುವುದಿಲ್ಲ ಎಂಬುದು ಸಾರ್ವಜನಿಕರ ದೂರಾದರೆ, ತಂಗುದಾಣದ ಪಕ್ಕ ನಿಲ್ಲುವ ವ್ಯವಸ್ಥೆ ಇಲ್ಲ, ಅಲ್ಲಿ ಹೊಂಡಗಳಿವೆ ಎಂಬುದು ಬಸ್ ನವರ ಸಮಸ್ಯೆ. ಈ ಮಧ್ಯೆ ಗಜಗಾತ್ರದ ಹೊಂಡಗಳು ಸಮಸ್ಯೆಗೆ ಮತ್ತಷ್ಟು ತುಪ್ಪ ಎರೆಯುತ್ತಿವೆ.
Be the first to comment on "ಹಳೇ ರಸ್ತೆಯಲ್ಲಿ ಹೊಸ ಹೊಂಡಗಳು – ಬಂಟ್ವಾಳ ಜಂಕ್ಷನ್ ನಲ್ಲಿ ಜಾಗ್ರತೆ!!!"