ಬಂಟ್ವಾಳತಾಲೂಕಿನ ವಗ್ಗ ನೀರ್ಕಾಣ ಶಾಲೆಯಲ್ಲಿ ಮಂಗಳೂರಿನ ಪಾದುವ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ನಡೆಯುತ್ತಿದ್ದು, ಈ ಸಂದರ್ಭ ಅಗ್ನಿಶಾಮಕದಳದ ಪ್ರಾತ್ಯಕ್ಷಿಕೆ ನಡೆಯಿತು.
ಬಂಟ್ವಾಳ ಅಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿ ರಾಜೀವ್ ಅವರು ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ಹೇಗೆ ತಪ್ಪಿಸಬಹುದು ಹಾಗು ನಿಯಂತ್ರಿಸಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಅರಿವು ಮತ್ತು ಪ್ರಾತ್ಯಕ್ಷಿಕೆ ನೀಡಿದರು.
ಈ ಸಂದರ್ಭ ಕೃತಕವಾಗಿ ಮನೆಯನ್ನು ನಿರ್ಮಿಸಿ ಬೆಂಕಿಯನ್ನು ಕೊಟ್ಟು ವಿವರಣೆಯನ್ನು ನೀಡುತ್ತಾ ಬೆಂಕಿಯನ್ನು ನಂದಿಸಿದರು. ಜೊತೆ ಬಂಟ್ವಾಳದ ಅಗ್ನಿಶಾಮಕ ಠಾಣಾಧಿಕಾರಿ ಅಗ್ನಿಶಾಮಕ ಠಾಣಾಧಿಕಾರಿ ನೀರ್ ಮಹಮದ್ ಅಗ್ನಿಶಾಮಕ ಸಿಬಂದಿಗಳಾದ ಸುರೇಂದ್ರ, ಸತೀಶ್ ಶೆಣೈ, ನಂದಪ್ಪ ಹಾಗು ಪಾದುವಾ ಪದವಿ ಪದವಿಪೂರ್ವ ಕಾಲೇಜ್ ನ ಯೋಜನಾಧಿಕಾರಿ ಯತಿರಾಜ್ , ಸ್ನೇಕ್ ಕಿರಣ್ ಇದ್ದರು. ಮೆಲರೊಯಿ ಪ್ರೀತಮ್ ನಿರೂಪಿಸಿದರು, ಸಹ ಯೋಜನಾಧಿಕಾರಿಯಾದ ಅನಿಲ್ ಡಿ‘ಮೆಲ್ಲೊ ಸ್ವಾಗತಿಸಿದರು ಮತ್ತು ಸುಷ್ಮಾ ವಂದಿಸಿದರು.
Be the first to comment on "ವಗ್ಗದ ಎನ್ನೆಸ್ಸೆಸ್ ಶಿಬಿರದಲ್ಲಿ ಅಗ್ನಿಶಾಮಕದಳದ ಪ್ರಾತ್ಯಕ್ಷಿಕೆ"