ಮನುಷ್ಯನ ಜ್ಞಾನದ ಹಸಿವು ನೀಗಿಸುವ ಕೆಲಸ ಪುಸ್ತಕಗಳು ಮಾಡುತ್ತಿದೆ ಎಂದು ಜೇಸೀ ವಲಯ 15ರ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರ್ ಹೇಳಿದರು.
ಜೇಸೀಐ ಜೋಡುಮಾರ್ಗ ನೇತ್ರಾವತಿಯ ಗೃಹ ಪತ್ರಿಕೆ ಲೋಕಾರ್ಪಣೆ ಮಾಡಿ ಮಾತನಾಡಿದರು. ವ್ಯಕ್ತಿ ವಿಕಸನ ಮಾಡುವ ಪುಸ್ತಕ ಮಾನವನ ಬೆಳವಣಿಗೆಯಲ್ಲಿ ಸಕಾರಾತ್ಮಕ ಫಲಿತಾಂಶ ನೀಡುತ್ತಿದೆ. ಪುಸ್ತಕ ಓದುವ ಹವ್ಯಾಸ ಹೆಚ್ಚಿಸುವ ಕೆಲಸ ಜೇಸೀ ಐ ಜೋಡುಮಾರ್ಗ ನೇತ್ರಾವತಿ ಮಾಡುವುದು ಶ್ಲಾಘನೀಯ ಎಂದರು. ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾದ ಸವಿತಾ ನಿರ್ಮಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷರಾದ ಪಶು ಪತಿ ಶರ್ಮ, ವಲಯದ ಪ್ರಥಮ ಮಹಿಳೆ ಸೌಮ್ಯ ರಾಕೇಶ್, ವಲಯಡಳಿತ ಮಂಡಳಿ ಸದಸ್ಯರಾದ ಅಶೋಕ್ ಚೂಂತಾರ್, ಶ್ರೀನಿವಾಸ ಐತಾಳ್, ಜೇಸೀ ಪೂರ್ವಾಧ್ಯಕ್ಷರಾದ ಅಹ್ಮದ್ ಮುಸ್ತಾಫ, ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಉಮೇಶ್ ನಿರ್ಮಲ್, ಪದಾಧಿಕಾರಿಗಳಾದ ಥಾಮಸ್ ಡಿಕೋಸ್ತ , ಯೋಗೀಶ್ ಬಂಗೇರ ಉಪಸ್ತಿತರಿದ್ದರು.
Be the first to comment on "ಜೋಡುಮಾರ್ಗ ಜೇಸೀ ಗೃಹ ಪತ್ರಿಕೆ ‘ನೇತ್ರಾವತಿ ‘ ಲೋಕಾರ್ಪಣೆ"