ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಎಲ್ಲಾ ಮನೆಗಳಲ್ಲಿ ಶೌಚಾಲಯಗಳಿರುವುದನ್ನು ಖಾತರಿಪಡಿಸಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಸುಡದೆ, ಸಮರ್ಪಕವಾಗಿ ನಿರ್ವಹಿಸಿ ತ್ಯಾಜ್ಯ ಮುಕ್ತ ಹಸಿರು ಗ್ರಾಮ ನಿರ್ಮಾಣಕ್ಕೆ ಜಾಗೃತಿ ವೇದಿಕೆ ಮಹಿಳೆಯರು ಸಂಕಲ್ಪಿಸಿದ್ದಾರೆ.
ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರೋಜೆಕ್ಟ್, ಸುಗ್ರಾಮ ಸಂಘ, ಗ್ರಾಮ ವಿಕಾಸ ಕೇಂದ್ರ ಹಾಗೂ ಗ್ರಾಮ ಪಂಚಾಯತ್‌ನ ಸಹಭಾಗಿತ್ವದಲ್ಲಿ ನವಶಕ್ತಿ ಯುವಕ ಮಂಡಲದ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ತಂಗಮ್ಮ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ಜಾಗೃತಿ ಹಾಗೂ ಸ್ವಚ್ಛತೆಯೇ ಸಮೃದ್ಧಿ ಸ್ವಚ್ಛತೆಯೇ ಸಂಸ್ಕೃತಿ ಅರಿವಿನ ಅಭಿಯಾನದಲ್ಲಿ ಭಾಗವಹಿಸಿದ ಮಹಿಳೆಯರು ಈ ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ.
ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಶೌಚಾಲಯದ ಮಹತ್ವ, ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕ ನಿರ್ವಹಣೆಯ ಅಗತ್ಯ, ಉದ್ಯೋಗ ಖಾತರಿ ಯೋಜನೆ, ಸೋಲಾರ್ ವಿದ್ಯುತ್ ಉಪಯೋಗದ ಕುರಿತು ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾಹಿತಿ ನೀಡಿ ಸಂವಾದ ನಡೆಸಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಪಂಚಾಯತ್ ಸದಸ್ಯರಾದ ರಂಜಿನಿ, ಕಲ್ಯಾಣಿ, ಸಿಬ್ಬಂದಿಗಳಾದ ವಿನೋದ, ಶುಭಾ ಸಂವಾದದಲ್ಲಿ ಭಾಗವಹಿಸಿದರು. ಗ್ರಾಮ ವಿಕಾಸ ಕೇಂದ್ರ ಪ್ರೇರಕಿ ಶಶಿಕಲಾ ಸ್ವಾಗತಿಸಿದರು. ಸಂಯೋಜಕ ಚೇತನ್ ವಂದಿಸಿದರು. ಮಮತಾ, ಜಯಂತಿ ಸಹಕರಿಸಿದರು.
Be the first to comment on "ತ್ಯಾಜ್ಯಮುಕ್ತ ಹಸಿರು ಗ್ರಾಮ ನಿರ್ಮಾಣಕ್ಕೆ ಮಹಿಳೆಯರ ಸಂಕಲ್ಪ"