ನಿಮ್ಮ ಧ್ವನಿ

ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿಯ ಸಹಾಯಕ್ಕೆ ನೆರವಾಗುವಿರಾ?

  • ಆಶಿಕ್ ಕುಕ್ಕಾಜೆ (phone: 9591557448)

 ಇದು ಒಂದು ತಾಯಿಯ ಕರುಣಾಜನಕ ಕಥೆ. ಪುತ್ತೂರು ತಾಲೂಕಿನ ಐತೂರು ಗ್ರಾಮದ ಮೂಜೂರು ಎಂಬಲ್ಲಿ ವಾಸಿಸುತ್ತಿರುವ ದಿವಂಗತ ಮೊಹಮ್ಮದ್ ಕಾಸಿಂ ರವರ ಪತ್ನಿ ಉಮೈಬಾ ಅವರ ಪರಿಸ್ಥಿತಿ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಚಿಮ್ಮದಿರದು. ಕಳೆದ ಹತ್ತು ವರ್ಷಗಳಿಂದ ಗಂಡನನ್ನು ಕಳೆದುಕೊಂಡ ಉಮೈಬಾ ಕಷ್ಟದಿಂದ ಜೀವನ ಸಾಗಿಸುತ್ತಿರುವ ನಿರ್ಗತಿಕ ಕುಟುಂಬ. ಎರಡು ವರ್ಷದ ಹಿಂದೆ ತನ್ನ ಮನೆಯ ಹೊರಗೆ ಬಟ್ಟೆ ಒಣ ಹಾಕಲು ಮನೆಯ ಅಂಗಳಕ್ಕೆ ಹೋದಾಗ ಬಿದ್ದು ಗಾಯಗೊಂಡ ಉಮೈಬಾ ರವರ ಕಾಲು ಮುರಿದ ಪರಿಣಾಮವಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ರಾಡ್ ಹಾಕಲಾಯಿತು. ತದನಂತರ ಮೂರು ಶಸ್ತ್ರ ಚಿಕಿತ್ಸೆಯೂ ನಡೆಯಿತು. ಸೊಂಟದ ಎಲುಬು ತೆಗೆದು ಕಾಲಿಗೆ ಇಡುವಂತೆ ವೈದ್ಯರು ತಿಳಿಸಿದಾಗ ಅದಕ್ಕೂ ಒಪ್ಪಿಕೊಂಡು ಚಿಕಿತ್ಸೆ ನಡೆಸಿದರು. ಆದರೆ ಯಾವುದೇ ಚಿಕಿತ್ಸೆಯಿಂದಲೂ ಫಲ ದೊರೆಯಲಿಲ್ಲ. ನಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ ಮನೆಯಲ್ಲೇ ಉಳಿದುಕೊಂಡ ಉಮೈಬಾ ಅವರಿಗೆ ಊರವರು ಸೇರಿ ಸಣ್ಣ ಮನೆಯೊಂದನ್ನು ಕಟ್ಟಿಸಿ, ಧನಸಹಾಯ ಕೂಡಾ ಮಾಡಿದರು.

ಜಾಹೀರಾತು

ಆದರೆ ನಂತರ ಮೂಲೆ ಸೇರಿದ ಉಮೈಬಾ ರವರ ದೇಹದ ಎಲ್ಲಾ ಭಾಗದಲ್ಲಿ ಅಲರ್ಜಿ ತರಹದ ಹುಣ್ಣಾಯಿತು. ಇದರಿಂದ ಎದ್ದು ಕುಳಿತುಕೊಳ್ಳಲೂ ಆಗದೆ, ಮಲಗಲೂ ಆಗದೆ, ಶೌಚಾಲಯಕ್ಕೂ ಹೋಗಲಾಗದೆ ಚಿಂತಾಜನಕ ಸ್ಥಿತಿಯಲ್ಲಿ ಆದ ತಾಯಿ ಮಕ್ಕಳಿಗೆ ತಿನ್ನಲು ಆಹಾರ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇದೀಗ ತಾಯಿ ಹಾಗೂ ಮಕ್ಕಳು ಆಹಾರಕ್ಕಾಗಿ ನೆರೆಮನೆಯವರನ್ನು ಆಶ್ರಯಿಸಿದ್ದಾರೆ. ಕುಟುಂಬಕ್ಕೆ ನೆರಮನೆಯವರು ದಿನಂಪ್ರತೀ ಊಟ ತಿಂಡಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಮಕ್ಕಳಿಬ್ಬರೂ ಅಪ್ರಾಪ್ತರಾದುದರಿಂದ ತಾಯಿಯ ಶುಶ್ರೂಷೆ ಮಾಡುವಷ್ಟು ಶಕ್ತರಾಗಿಲ್ಲ. ವಯಸ್ಸಿಗೆ ಬಾರದ ಮಕ್ಕಳಿಬ್ಬರು ತಾಯಿಯಲ್ಲಿ ಅದು ಬೇಕು ಇದು ಬೇಕು ಎಂದು ಕೇಳುವಾಗ ಎಂಥಾ ಕಲ್ಲು ಹೃದಯವೂ ಕರಗಿ ಹೋಗಬಹುದು. ೫ನೇ ತರಗತಿಯಲ್ಲಿ ಕಲಿಯುತ್ತಿರುವ ಫಾತಿಮತ್ ಅಫ್ರೀದಾ ಮತ್ತು೬ ನೇ ತರಗತಿಯಲ್ಲಿ ಕಲಿಯುತ್ತಿರುವ ಮುಹಮ್ಮದ್ ಅನಸ್ ಏನು ಮಾಡಲು ಸಾಧ್ಯ ಹೇಳಿ.

ಪ್ರಸ್ತುತ ಕಾಲಿನಲ್ಲಿ ರಾಡ್ ಇರುವ ನೋವಿನ ಜೊತೆಗೆ ದೇಹವಿಡೀ ಗಾಯದಿಂದಾಗಿ ಶರೀರವಿಡೀ ತುರಿಕೆಯಿಂದ ಕೂಡಿದ ತಾಯಿಯ ರೋಧನವು ನೋಡಲಸಾಧ್ಯ. ನೋವಿನೊಂದಿಗೆ ನರಳುವ ತಾಯಿ ತುರಿಸುವಾಗ ಶರೀರವಿಡೀ ರಕ್ತ ಸೋರಲು ಪ್ರಾರಂಭವಾಗುತ್ತದೆ. ಅತ್ತ ತನಗೆ ಚಿಕಿತ್ಸೆ ಮುಂದುವರಿಸಲಾಗದೇ ಇತ್ತ ಮಕ್ಕಳ ಪಾಲನೆ ಮಾಡಲಾರದೇ ಚಡಪಡಿಸುತ್ತಿರುವ ಅಸಹಾಯಕ ತಾಯಿಗೆ ಕೂಡಲೇ ಅವರಿಗೆ ಚಿಕಿತ್ಸೆ ಅಗತ್ಯವಿದ್ದು, ದಾನಿಗಳ ಮೊರೆ ಹೋಗಲಲ್ಲದೇ ಬೇರೆ ದಾರಿಯಿಲ್ಲದಾಗಿದೆ.

 ಆದುದರಿಂದ ನಮ್ಮ ಹೆತ್ತ ತಾಯಿಯ ಸ್ಥಾನದಲ್ಲಿರುವ ನಿರ್ಗತಿಕ ತಾಯಿ ಕೊಡುಗೈ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದ್ದು, ತಾಯಿಗೆ ನೆರವಾಗಬೇಕಾಗಿ ತಮ್ಮಲ್ಲೆರಲ್ಲೂ ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ತಾಯಿಯ ಕುರಿತ ಹೆಚ್ಚಿನ ಮಾಹಿತಿಗಾಗಿ 7760484395 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ತಿಳಿಸಿದ್ದಾರೆ.

Bank Name: Vijaya Bank
Account holder name: Umaiba
Account No.: 116201011000119
Branch: Nettana
IFS Code: VIJB0001162

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.