ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಪ್ರಮುಖರೊಂದಿಗೆ ವಿವಿಧ ಇಲಾಖೆಗೆ ಸಂಬಂದ ಪಟ್ಟಂತೆ ವಿವಿಧ ಯೋಜನೆಯಡಿ ನೀಡಲಾಗುವ ಸವಲತ್ತುಗಳ ಬಗ್ಗೆ ಸಭೆಯನ್ನು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆಯಿತು.
ಬಳಿಕ ಮಾತನಾಡಿದ ಅವರು ಪರಿಶಿಷ್ಟ ಜಾತಿ ಗೆ ಸರಕಾರದ ಸಿಗಬೇಕಾದ ಸವಲತ್ತುಗಳು ಸಮಯಕ್ಕೆ ನೀಡಲು ಬೇಕಾದ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಲು ಸೂಚನೆ ನೀಡಿದರು. ವಿನಾ ಕಾರಣ ಸತಾಯಿಸಬಾರದು. ಪೋನ್ ಮೂಲಕ ಬೇಕಾದ ಮಾಹಿತಿಯನ್ನು ಅವರಿಗೆ ನೀಡಬೇಕು ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆಯಲು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ . ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರ್ . ಜಿಲ್ಲಾ ಪಂಚಾಯತ್ ನ ಸಾಮಾಜಿಕ ನ್ಯಾಯ ಸಮಿತಿ ಯ ಮಾಜಿ ಅಧ್ಯಕ್ಷರಾದ ಸಿ. ಕೆ ಚಂದ್ರಕಲಾ. ಮಂಗಳೂರು ಮಹಾನಗರ ಪಾಲಿಕೆ ಯ ನಗರಾಭಿವೃದ್ದಿ ಯ ಮಾಜಿ ಸದಸ್ಯರಾದ ಬಿ. ಎಸ್. ವಸಂತ ಕುಮಾರ್ . ಎಪಿಎಂಸಿ ಸದಸ್ಯರಾದ ವಿಠಲ್ ಸಾಲ್ಯಾನ್ ಹಾಗು ಪರಿಶಿಷ್ಟ ಜಾತಿಯ ಜಿಲ್ಲೆಯ ಪ್ರಮುಖ ನಾಯಕರಾದ ವಿನಯ ನೇತ್ರ ದಡ್ಡಲ್ಕಾಡು. ಶೀನ ಮಾಸ್ತಿಕಟ್ಟೆ. ಜಯಪ್ರಕಾಶ್ ಪುತ್ತೂರು .ಅಶೋಕ್ ಕುಮಾರ್. ಉಮನಾಥ್ ಅಮೀನ್. ಉಮೇಶ್
ಕೋಟ್ಯಾನ್. ಡಿ.ಎಸ್ ಪ್ರಸನ್ನ. ಆನಂದ ಪಾಂಗಲ. ವಿಠಲ ಮೂಡಬಿದ್ರೆ. ಗಂಗಾಧರ ಕೋಟ್ಯಾನ್. ಸದಾಶಿವ ಬೆಳ್ತಂಗಡಿ. ರಾಘವ ಬೆಳ್ತಂಗಡಿ. ವನಿತ ಸೋಮನಾಥ್. ಕಿಟ್ಟ ಅಖಿಲ. ಜನಾರ್ಧನ ಬೋಳಂತೂರ್. ಹಾಗೂ ಇನ್ನಿತರರು ಈ ಸಭೆಯಲ್ಲಿ ಭಾಗವಹಿಸಿದ್ದರು.
Be the first to comment on "ಸತಾಯಿಸದೆ ಸವಲತ್ತು ಒದಗಿಸಲು ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷೆ ಸೂಚನೆ"