ಕರ್ನಾಟಕ ರಾಜ್ಯ ಎನ್.ಪಿ.ಎಸ್. ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕ ಆಶ್ರಯದಲ್ಲಿ ಹಳೇ ಪಿಂಚಣಿ ಮರುಜಾರಿಗೆ ಹಕ್ಕೊತ್ತಾಯವಾಗಿ ಬಿ.ಸಿ.ರೋಡಿನ ಸರಕಾರಿ ನೌಕರರ ಭವನದಲ್ಲಿ ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಎಂಬ ರಕ್ತದಾನ ಸತ್ಯಾಗ್ರಹ ನಡೆಯಿತು.
ಶಾಸಕ, ಜಿಪಂ, ತಾಪಂ ಸದಸ್ಯರ ಸಹಿತ ರಾಜಕಾರಣಿಗಳು ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಇದನ್ನು ಬೆಂಬಲಿಸಿ ಆಗಮಿಸಿದ ಶಾಸಕ ರಾಜೇಶ್ ನಾಯ್ಕ್, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸರಕಾರದ ಮಟ್ಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಹೇಳಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಜಿ.ಪಂ ಸದಸ್ಯ ರಾದ ಎಂ. ಎಸ್. ಮಹಮ್ಮದ್, ತುಂಗಪ್ಪ ಬಂಗೇರ, ತಾ.ಪಂ ಸದಸ್ಯ ರಾದ ಸಂಜೀವ ಪೂಜಾರಿ, ಗಣೇಶ್ ಸುವರ್ಣ, ಮಾಜಿ ಸದಸ್ಯ ದಿನೇಶ್ ಅಮ್ಟೂರು, ವಿವಿಧ ಶಿಕ್ಷಣ ಸಂಘಟನೆಗಳ ಪ್ರಮುಖರಾದ ಉಮಾನಾಥ ರೈ ಮೇರಾವು, ರಮೇಶ್ ನಾಯಕ್ ರಾಯಿ, ರಮಾನಂದ ರಾಯಿ, ಶಿವಪ್ರಸಾದ್ ಶೆಟ್ಟಿ, ಜಿನ್ನಪ್ಪ, ಜೋಯಲ್ ಲೋಬೋ, ಮಹೇಶ್ ಕರ್ಕೇರ, ಮಹಮ್ಮದ್ ತುಂಬೆ, ರಾಮಚಂದ್ರ ರಾವ್, ರಕ್ತನಿಧಿ ಮುಖ್ಯಸ್ಥ ಶರತ್ , ಜನಾರ್ಧನ್, ರಮಾನಂದ ನೂಜಿಪ್ಪಾಡಿ, ಸೇಸಪ್ಪ ಮೂಲ್ಯ ವೇದಿಕೆಯಲ್ಲಿದ್ದರು. ತಾಲೂಕು ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಪ್ರಸ್ತಾವನೆಗೈದರು. ಜಯರಾಮ್ ಸ್ವಾಗತಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಅವಿನಾಶ್ ವಂದಿಸಿದರು.
Be the first to comment on "ಬಂಟ್ವಾಳದಲ್ಲಿ ಎನ್.ಪಿ.ಎಸ್. ನೌಕರರ ಸಂಘದಿಂದ ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಸತ್ಯಾಗ್ರಹ"