ಅಹಿಂಸಾ ಮಾರ್ಗವು ಸ್ವಾರ್ಥರಹಿತ ಸಮಾಜ ನಿರ್ಮಾಣಕ್ಕೆ ಪ್ರೇರಕ ಎಂದು ಎಸ್.ವಿ.ಎಸ್ ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ ಹೇಳಿದರು.
ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಹಾತ್ಮ ಗಾಂಧಿಜೀಯವರ 150ನೇ ಜನ್ಮದಿನಾಚರಣೆ ಕಾರ್‍ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಜಾತಿಯತೆ, ಮೇಲು-ಕೀಳು, ಅಸ್ಪಶೃಶ್ಯತೆಗಳಿಂದ ವಕ್ತಿತ್ವ ವಿಕಸನ ಮತ್ತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಧೂಮಪಾನ-ಮಧ್ಯಪಾನ ಕೆಟ್ಟ ಚಟಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಯುವಜನತೆ ಸ್ವಾರ್ಥಕ್ಕಾಗಿಭರವಸೆಗಳನ್ನು ನಾಶಮಾಡುತ್ತಿದ್ದಾರೆ. ಶಿಕ್ಷಣದ ಜಾಗೃತಿ ಮೂಲಕ ಸಮಾಜದಲ್ಲಿರುವ ಕೆಟ್ಟ ಪಿಡುಗುಗಳನ್ನು ಹೋಗಲಾಡಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಯುವಜನತೆ ಗಾಂಧಿಜೀಯ ತತ್ವ-ಆದರ್ಶಗಳನ್ನು ಪಾಲಿಸಿ ಜೀವನುದ್ದಕ್ಕೂ ಅನುಸರಿಸಿಕೊಂಡುಸ್ವಚ್ಛ ಭಾರತದ ನಿರ್ಮಾಣಕ್ಕೆಪಣತೊಡಬೇಕು ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ, ಎಲ್ಲಾ ಉಪನ್ಯಾಸಕ-ಉಪನ್ಯಾಸಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Be the first to comment on "ಎಸ್.ವಿ.ಎಸ್ ಪ.ಪೂ. ಕಾಲೇಜು: ಗಾಂಧಿಜೀ 150ನೇ ಜನ್ಮದಿನಾಚರಣೆ"