ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿಕೊಂಡ ಟೆಲಿಕಾಂ ಕಂಪನಿಗಳೀಗ ಅವುಗಳನ್ನು ಡಿಲಿಂಕ್ ಮಾಡಲೇಬೇಕಿವೆ. ಗ್ರಾಹಕರ ದೃಢೀಕರಣಕ್ಕಾಗಿ ಲಿಂಕ್ ಮಾಡಿಕೊಂಡ ಆಧಾರ್ ಸಂಖ್ಯೆಗಳನ್ನು ಡಿಲಿಂಕ್ ಮಾಡುವ ಕುರಿತ ಪ್ಲಾನ್ ಅನ್ನು 15 ದಿನಗಳಲ್ಲಿ ಹೇಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಎಲ್ಲಾ ದೂರಸಂಪರ್ಕ ಕಂಪನಿಗಳಿಗೆ ಸೂಚಿಸಿದೆ.
ಖಾಸಗಿ ಸಂಸ್ಥೆಗಳು ಆಧಾರ್ ಅನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಮತ್ತು ಇತರೆ ಸೇವಾದಾತ ಸಂಸ್ಥೆಗಳಿಗೆ ಯುಐಎಡಿಐ ಸುತ್ತೋಲೆ ರವಾನಿಸಿದೆ. ಡಿಲಿಂಕ್ ಯೋಜನೆ ಕುರಿತು ವಿವರ ಸಲ್ಲಿಸಲು ಅಕ್ಟೋಬರ್ 15ರ ಗಡುವನ್ನು ವಿಧಿಸಲಾಗಿದೆ.
ಮೊಬೈಲ್ ಫೋನ್ ಕಂಪನಿಗಳು ಇನ್ನು ಪೇಪರ್ ಆಧಾರಿತ ತಂತ್ರದಂತಹ ಪರ್ಯಾಯದತ್ತ ಯೋಚಿಸಬೇಕಿದೆ. ಭೌತಿಕ ರೂಪದಲ್ಲಿ ಫೊಟೋ, ಸಹಿ ಪಡೆಯಬೇಕಿದೆ. ಗ್ರಾಹಕರಿಗೆ ಕರೆ ಮಾಡಿ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ದೃಢೀಕರಿಸಿಕೊಳ್ಳಬೇಕಾಗುತ್ತದೆ.
Be the first to comment on "ಆಧಾರ್ ಡಿಲಿಂಕ್ ಹೇಗೆ ಮಾಡ್ತೀರಿ ಹೇಳಿ: ಟೆಲಿಕಾಂ ಕಂಪನಿಗಳಿಗೆ ಪ್ರಶ್ನೆ"