ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ 18ನೇ ವರ್ಷದ ನವದಂಪತಿ ಸಮಾವೇಶದಲ್ಲಿ 145 ಜೊತೆ ದಂಪತಿ ಪಾಲ್ಗೊಂಡಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಾತುಗಳನ್ನಾಡಿ ವಧೂ–ವರರು ಎಂದರೆ ಲಕ್ಷ್ಮೀ–ನಾರಾಯಣರ ಸ್ವರೂಪರು ಎಂದರು.
ನಮ್ಮ ಜೀವನದಲ್ಲಿರುವಂತಹ ಮಹತ್ವಪೂರ್ಣವಾದ ಘಟ್ಟ. ಕುಟುಂಬ ಎಂದರೆ ಧರ್ಮ, ಸಂಸ್ಕೃತಿಯ ಕೇಂದ್ರಬಿಂದು. ’ಧನ್ಯೋಗೃಹಸ್ಥಾಶ್ರಮಎಲ್ಲರಿಂದಲೂ ಶ್ರೇಷ್ಠವಾದುದು. ನಮ್ಮದೇಶ ಉಳಿಯುವುದು ಜನಸಂಖ್ಯೆಯ ಆಧಾರದ ಮೇಲೆ. ಸುಂದರವಾದ ದಾಂಪತ್ಯಜೀವನ ನಿಮ್ಮದಾಗಲಿ ಎಂದು ಹಾರೈಸಿದರು.
ಜ್ಯೇಷ್ಠ ಪ್ರಚಾರಕರು, ಕುಟುಂಬ ಪ್ರಬೋಧನ್ ಸಹಸಂಯೋಜಕ ಸು.ರಾಮಣ್ಣ ನವದಂಪತಿಗೆ ಹರಸಿ ಮಾರ್ಗದರ್ಶನ ಮಾಡಿದರು. ನಮ್ಮ ಮನೆಯ ರೀತಿ ನೀತಿ ಅತಿಥಿ ದೇವೋಭವ ಮತ್ತು ಉತ್ತಮ ಪರಂಪರೆಯಿಂದ ಕೊಡಬೇಕು. ನಮ್ಮದೇ ಆದ ಕುಟುಂಬವನ್ನು ನಾವು ಉಳಿಸಿ ಬೆಳೆಸಬೇಕು. ಮದುವೆ ಆದ ನಂತರವೂ ನಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ನಮ್ಮ ಭಾಷೆಯನ್ನು, ನಮ್ಮ ಮನೆಯನ್ನು ಭಾರತೀಯ ಮನೆಯನ್ನಾಗಿ ಮಾಡುವುದು ನಮ್ಮಕರ್ತವ್ಯ ಎಂದು ಅವರು ಮಾತನಾಡಿದರು. ಹಿರಿಯ ದಂಪತಿಗಳಾಗಿ ಪಟ್ಲಗುತ್ತು ಮಹಾಬಲ ಶೆಟ್ಟಿ ಮತ್ತು ಲಲಿತಾ ದಂಪತಿಗಳು ಆಗಮಿಸಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಇತ್ತೀಚೆಗೆ ಮದುವೆ ಆದ ದಂಪತಿಗಳು ಆಗಮಿಸಿದ ಸಂದರ್ಭ ಮಾತೃಮಂಡಳಿಯ ಮುತ್ತೈದೆಯರು ಕೈಕಾಲುಗಳಿಗೆ ನೀರಿತ್ತು ಪಣ್ಣೀರು ಚಿಮುಕಿಸಿ ಆರತಿ ಬೆಳಗಿ ಅರಸಿನ ಕುಂಕುಮ ನೀಡಿ ಸಾಂಪ್ರದಾಯಿಕ ನಗುಮುಖದ ಸ್ವಾಗತ ನೀಡಿದರು. ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಹಾಗೂ ಸಂಚಾಲಕರಾದ ವಸಂತ ಮಾಧವ ಉಪಸ್ಥಿತರಿದ್ದರು. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಮಾತೃ ಮಂಡಳಿಯ ಸದಸ್ಯರುಗಳಾದ ಶೋಭಾ ಪ್ರಾರ್ಥಿಸಿದರು. ಪ್ರೇಮ ನಾರಾಯಣಗೌಡ ಸ್ವಾಗತಿಸಿ, ವೀಕ್ಷಿತಾ ರವಿರಾಜ್ ವಂದಿಸಿದರು. ಮಂಜುಳಾ ನಿರೂಪಿಸಿದರು
Be the first to comment on "ಕಲ್ಲಡ್ಕದಲ್ಲಿ ನವದಂಪತಿ ಸಮಾವೇಶಕ್ಕೆ 145 ನವಜೋಡಿ"