- ಬಂಟ್ವಾಳ ಪುರಸಭೆ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಸೂಚನೆ
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸಭೆಯ ಮುಖ್ಯಾಂಶಗಳು ಇವು.
- ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ನಳ್ಳಿ, ದಾರಿದೀಪಗಳಿವೆ ಎಂದು ಅಧಿಕಾರಿಗಳಿಂದ ಮಾಹಿತಿ. ಪುರಸಭೆ ಸರ್ವೆ ಪ್ರಕಾರ 570 ಎಂದು ಮುಖ್ಯಾಧಿಕಾರಿ ಹೇಳಿದರೆ ಅದಕ್ಕಿಂತಲೂ ಜಾಸ್ತಿ ಇವೆ ಎಂದರು ಶಾಸಕ ರಾಜೇಶ್ ನಾಯ್ಕ್.
- ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯಲ್ಲಿ 90 ಕಿ.ಮೀ ಪೈಕಿ, 85 ಕಿ.ಮೀ.ಪೈಪ್ ಲೈನ್ ಪೂರ್ಣಗೊಂಡಿದ್ದು, 5040 ನೀರಿನ ಸಂಪರ್ಕ ನೀಡಲಾಗುತ್ತಿದೆ ಎಂದು ಕೆಯುಡಬ್ಲ್ಯ ಎಸ್ ನ ಶೋಭಾಲಕ್ಮ್ಮಿ ಮಾಹಿತಿ.
- ಅನಧಿಕೃತ ಸಂಪರ್ಕ ಪಡೆಯದಂತೆ ತಂತ್ರಜ್ಞಾನ ಅಳವಡಿಸಲು ಶಾಸಕ ಸೂಚನೆ.
- ಪುರಸಭಾ ವ್ಯಾಪ್ತಿಯಲ್ಲು ಸಾಕಷ್ಟ ಅನಧಿಕೃತ ದಾರಿದೀಪಗಳು ಉರಿಯುತ್ತಿರುವ ಬಗ್ಗೆ ಸಭೆಯ ಗಮನ ಸೆಳೆದರಲ್ಲದೆ 2.77 ಕೋ.ರೂ.ವಿದ್ಯುತ್ ಬಿಲ್ಲು ಪಾವತಿಸಲು ಪುರಸಭೆ ಬಾಕಿ ಇಟ್ಟಿರುವ ಬಗ್ಗೆ ಮೆಸ್ಕಾಂ ಇಂಜಿನಿಯರ್ ಮಾಹಿತಿ
- ನೀರಿನ ಸಮಸ್ಯೆಯ ಬಗ್ಗೆ ದೂರು ಬರುತ್ತಿದ್ದು,ಈಗಾಗಲೇ ಎರಡು ಪ್ರದೇಶಕ್ಕೆ ತಾನೇ ಟ್ಯಾಂಕರ್ ಪೂರೈಸುವ ವ್ಯವಸ್ಥೆ ಮಾಡಿದ್ದು ಇನ್ನು ಮುಂದೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ಶಾಸಕ ಸೂಚನೆ,
- ಕಂಚಿನಡ್ಕ ಪದವಿನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತ ಇರುವ ಮನೆಗಳನ್ನು ಸ್ಥಳಾಂತರಿಸಲು ಇರಾ ಗ್ರಾಮದಲ್ಲಿ ಜಮೀನು ಗುರುತಿಸಲಾಗಿದೆ.ಅಲ್ಲಿ ಪೈರೋಲಿಸಿಸ್ ಯಂತ್ರ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕಸವಿಲೇವಾರಿಯ ಗುತ್ತಿಗೆದಾರನ ಅವಧಿ ಈಗಾಗಲೇ ಪೂರ್ಣಗೊಂಡಿದೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮಾಹಿತಿ.
- ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಯಕಟ್ಟಿನ ಏಳು ಕಡೆಗಳಲ್ಲಿ ಸಿಸಿ ಕ್ಯಾಮಾರ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಎಸ್ ಐ ಹರೀಶ್ ಮನವಿ ನೀಡಿದಾಗ ಸಿಸಿ ಕ್ಯಾಮರ ಅಳವಡಿಸುವ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯಪ್ರರ್ವತವಾಗುವಂತೆ ಶಾಸಕ ಸೂಚನೆ, ಇದಕ್ಕೆ ಗುಣಮಟ್ಟದ ಸಿಸಿ ಕ್ಯಾಮಾರವನ್ನೇ ಅಳವಡಿಸಲು ಸೂಚನೆ.
- ಟ್ರಾಫಿಕ್, ಪಾರ್ಕಿಂಗ್ ಬಗ್ಗೆ ಸ್ಥಳ ಪರಿಶೀಲನೆಗೆ ಶಾಸಕ ಸೂಚನೆ. ಎಸ್.ಐ. ಮಂಜುಳಾ ಈ ಕುರಿತು ಗಮನ ಸೆಳೆದರು.
ಮಂಗಳೂರು ಸಹಾಯಕ ಕಮೀಷನರ್ ಹಾಗೂ ಪುರಸಭೆಯ ಆಡಳಿತಾಧಿಕಾರಿ ರವಿಚಂದ್ರ ನಾಯಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಕೆಯುಡಬ್ಲ್ಯ ಎಸ್ ನಿಂಜಿನಿಯರ್ ಗಳಾದ ಜಗದೀಶ್, ಸಂಶುದ್ದೀನ್, ಶೋಭಾಲಕ್ಷ್ಮೀ, ಮೆಸ್ಕಾಂ ಎಇಇ ನಾರಾಯಣ ಭಟ್, ಪುರಸಭೆಯ ಕಿರಿಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಅರಣ್ಯಾಧಿಕಾರಿ ಬಿ.ಸುರೇಶ್ ಪುರಸಭೆಯ ಅಧಿಕಾರಿಗಳು ಹಾಜರಿದ್ದರು.ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸ್ವಾಗತಿಸಿ,ವಂದಿಸಿದರು.
ಪುರಸಭೆ ಕಟ್ಟಡದಲ್ಲಿ ಬಕೆಟ್ ರಾಶಿ: ತತ್ ಕ್ಷಣ ವಿಲೇವಾರಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ
Be the first to comment on "ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟು, ಆಯ್ದ ಜಾಗಗಳಲ್ಲಿ ಸಿಸಿ ಕ್ಯಾಮರಾ"