ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡಲು ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಈ ಸಂಬಂಧ ಬಿ.ಸಿ.ರೋಡಿನ ಪರ್ಲಿಯ ನಿವಾಸಿ ನಿಯಾಜ್ ಹಸನ್ ಎಂಬಾತನನ್ನು ಬಂಧಿಸಿದ್ದಾರೆ.
ಈತನಿಂದ ಅಕ್ಕಿ ಸಹಿತ ಒಟ್ಟು 1.82 ಲಕ್ಷ ರೂ ಮೌಲ್ಯ ದ ಸೊತ್ತುಗಳನ್ನು ವಶಪಡಿಕೊಳ್ಳಲಾಗಿದೆ. ತುಂಬೆ ಸಮೀಪದ ರಾಮಾಲಕಟ್ಟೆ ಎಂಬಲ್ಲಿ ಮಂಗಳವಾರ ರಾತ್ರಿ ಗಸ್ತಿನಲ್ಲಿದ್ದು, ವಾಹನ ತಪಾಸಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಮತ್ತವರ ಸಿಬ್ಬಂದಿಗಳು ನಿರತರಾಗಿದ್ದ ಸಂದರ್ಭ, ತುಂಬೆಯಿಂದ ಬರುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು. ಈ ಸಂದರ್ಭ 50 ಕೆಜಿಯ 40 ಚೀಲದಲ್ಲಿ 20 ಕಿಂಟ್ವಾಲ್ ರೇಶನ್ ಅಕ್ಕಿ ತುಂಬಿಸಿದ್ದು ಪತ್ತೆಯಾಗಿದೆ. ತಕ್ಷಣ ಚಾಲಕನನ್ನು ವಿಚಾರಿಸಿದಾಗ ಅನ್ನಭಾಗ್ಯದ ಈ ಅಕ್ಕಿಯನ್ನು
ಬಿ. ಸಿ. ರೋಡು ಕಡೆಗೆ ಸಾಗಿಸುತ್ತಿರುವುದು ಬೆಳಕಿಗೆ ಬಂತು. ಪಿಕಪ್ ವಾಹನದಲ್ಲಿ ಗೋಣಿ ಚೀಲವನ್ನು ಹೊಲಿಯುವ 2 ಸಾವಿರ ರೂ ಮೌಲ್ಯ ದ ಮೆಶಿನ್ ಹಾಗೂ 50 ಖಾಲಿ ಗೋಣಿ ಚೀಲಗಳು ಪತ್ತೆಯಾದವು. ತಕ್ಷಣ ಪಿಕಪ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿ,ಆರೋಪಿಯನ್ನು ಬಂಧಿಸಿದ್ದಾರೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಅಹಾರ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಕಾರ್ಯಾಚರಣೆ ಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಸಿಬ್ಬಂದಿ ಗಳಾದ ಸುರೇಶ್, ಜಯರಾಮ್, ಜನಾರ್ದನ, ಶಿವಕುಮಾರ್ ನಾಯಕ್, ಕಿರಣ್ ಪಾಲ್ಗೊಂಡಿದ್ದರು
Be the first to comment on "ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ – ಆರೋಪಿಯ ಬಂಧನ"