ಡಿಸಿಐಬಿ ಪೊಲೀಸರು ವ್ಯಕ್ತಿಯೊಬ್ಬನ ಬಳಿಯಿಂದ ಸ್ಫೋಟಕಗಳ ಸಹಿತ 1 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನಸ್ವಾಮಿ (70) ಎಂಬಾತನನ್ನು ಬಂಧಿಸಲಾಗಿದ್ದು, ಈತ ಕುಕ್ಕಳ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಈತನಿಂದ 15 ಜಿಲೆಟಿನ್ ಕಡ್ಡಿ, 99 ಡಿಟೊನೇಟರ್ ಮತ್ತು ಸಾಗಾಟ ಮಾಡಲು ಉಪಯೋಗಿಸಿದ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪುಂಜಾಲಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ವಿವರ:
ಮಂಗಳೂರಿನ ಡಿಸಿಐಬಿ ಪೊಲೀಸ್ ಇನ್ಸ್ ಪೆಕ್ಟರ್ ಸುನಿಲ್ ವೈ ನಾಯಕ್ ಸಿಬ್ಬಂದಿಯೊಂದಿಗೆ ಬಿ.ಸಿ.ರೋಡ್, ಪುಂಜಾಲಕಟ್ಟೆ, ಬಂಟ್ವಾಳ ಕಡೆ ಕರ್ತವ್ಯದಲ್ಲಿದ್ದ ಸಂದರ್ಭ ಬೆಳಗ್ಗೆ 11 ಗಂಟೆ ಸುಮಾರಿಗೆ ಪುಂಜಾಲಕಟ್ಟೆಯಲ್ಲಿದ್ದ ಸಂದರ್ಭ ಖಚಿತ ವರ್ತಮಾನದ ಮೇರೆಗೆ ನೆಲ್ಲಿಗುಡ್ಡೆಯಿಂದ ಪುಂಜಾಲಕಟ್ಟೆ ಕಡೆಗೆ ಸ್ಪೋಟಕ ಸಾಗಾಟ ಮಾಹಿತಿ ಲಭಿಸಿದ್ದು, ಆತನನ್ನು ಕೆದ್ದಳಿಗೆ ಸ.ಹಿ.ಪ್ರಾ.ಶಾಲೆಯ ಬಳಿ ನಿಲ್ಲಿಸಿದಾಗ ಸ್ಫೋಟಕಗಳು ಪತ್ತೆಯಾಗಿವೆ ಎಂದು ಪ್ರಕರಣ ದಾಖಲಾಗಿದೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ| ಬಿ.ಆರ್ ರವಿಕಾಂತೇ ಗೌಡ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಜಿತ್ ಸೂಚನೆಯಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ ನಾಯಕ್‌ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಗಳಾದ ನಾರಾಯಣ, ,ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್, ಉದಯ ಗೌಡ, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ಎಸ್, ಶೋನ್ ಶಾ, ಸುರೇಶ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Be the first to comment on "ಸ್ಫೋಟಕ ವಸ್ತು ಸಾಗಾಟ ಪತ್ತೆ: ಓರ್ವನ ಬಂಧನ"