ಬಂಟ್ವಾಳ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯಡಿ ಪ.ಜಾತಿ, ಪಂಗಡದ 33 ಫಲಾನುಭವಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ಯಾಸ್ ಸ್ಟೌ, ಅನಿಲ ಸಿಲಿಂಡರ್, ಅನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿ ಮಾಡಿದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ರೋಟರಿ ಕ್ಲಬ್ ಬಂಟ್ವಾಳ ಮತ್ತು ಭದ್ರಾ ಗ್ಯಾಸ್ ಎಜೆನ್ಸಿ ವತಿಯಿಂದ ನೀಡಲ್ಪಟ್ಟ ಕುಕ್ಕರ್ ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ ಅವರು ಪ್ರಸ್ತಾವಿಸಿ, ಮಾಹಿತಿ ನೀಡಿದರು. ಈ ಸಂದರ್ಭ ಆನ್ಸ್ ಅಧ್ಯಕ್ಷೆ ವಿದ್ಯಾ ಅಶ್ವನಿ ರೈ, ರೋಟರಿ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ಶಿವಾನಿ ಬಾಳಿಗಾ, ಮೇಘಾ ಆಚಾರ್ಯ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಭದ್ರಾ ಗ್ಯಾಸ್ ಏಜನ್ಸಿ ವತಿಯಿಂದ ಸುರಕ್ಷತಾ ಮಾಹಿತಿಯನ್ನೂ ಒದಗಿಸಲಾಯಿತು.
Be the first to comment on "ಕೇಂದ್ರ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣೆ"