- 9845669640ಗೆ ಕರೆ ಮಾಡಿ, ಮೊದಲ 100 ಜನರಿಗಷ್ಟೇ ಅವಕಾಶ
ಬಂಟ್ವಾಳ ಪರಿಸರದ ಬ್ಯಾಂಕ್ ಪರೀಕ್ಷೆ ಎದುರಿಸುವವರು, ಬ್ಯಾಂಕ್ ಹುದ್ದೆಗೆ ಸೇರ್ಪಡೆಯಾಗಬಯಸುತ್ತಿರುವವರಿಗೆ ಇಲ್ಲಿಗೆ ಗುಡ್ ನ್ಯೂಸ್. ರೋಟರಿ ಕ್ಲಬ್ ಬಂಟ್ವಾಳ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳದ ವೃತ್ತಿ ಮಾರ್ಗದರ್ಶನ ಶಿಬಿರ ನುರಿತ ತಜ್ಞರಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರವನ್ನು ಸೆ.23ರಂದು ಭಾನುವಾರ ಮಧ್ಯಾಹ್ನ 2ರಿಂದ 5 ಗಂಟೆವರೆಗೆ ಏರ್ಪಡಿಸಿದೆ. ನೆನಪಿಡಿ, 9845669640 ಗೆ ಕರೆ ಮಾಡಿ ನೋಂದಾಯಿಸಿದ ಮೊದಲ 100 ಮಂದಿಗಷ್ಟೇ ಇಲ್ಲಿ ಅವಕಾಶ. ಪರೀಕ್ಷೆಯನ್ನು ಮಹತ್ವವಾಗಿ ಪರಿಗಣಿಸಿದವರು, ತರಬೇತಿಯ ಅವಶ್ಯಕತೆ ಇರುವವರು ಹಾಗೂ ಬ್ಯಾಂಕ್ ಪ್ರವೇಶಿಸುವ ಕುರಿತ ಮಾಹಿತಿಯನ್ನು ಪಡೆಯಲು ಇಚ್ಛಿಸುವವರಿಗೆ ರಾಜ್ಯ ಮಟ್ಟದ ನುರಿತ ತರಬೇತುದಾರರಾದ ಕಳೆದ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಪರಿಣಿತಿಯುಳ್ಳ ಹಾಗೂ ಖ್ಯಾತ ಅಂಕಣಕಾರರೂ ಆಗಿರುವ ಕಾರ್ಪೊರೇಶನ್ ಬ್ಯಾಂಕ್ ಪ್ರಧಾನ ಕಛೇರಿ ಮಂಗಳೂರಿನಲ್ಲಿ ಹಿರಿಯ ವ್ಯವಸ್ಥಾಪಕ ಆರ್.ಕೆ ಬಾಲಚಂದ್ರ ಉಚಿತಾ ಪರೀಕ್ಷಾ ಪೂರ್ವ ತರಬೇತಿ ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ.
ಏನೇನಿರುತ್ತದೆ?
ಈ ಬಾರಿಯ ಪರೀಕ್ಷಾ ವಿಧಾನದಲ್ಲಿ ಬದಲಾವಣೆಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪರೀಕ್ಷಾ ಸಿದ್ಧತೆ ಬಗ್ಗೆ ತರಬೇತಿ ನೀಡಲಿದ್ದಾರೆ. ಈಗಾಗಲೇ ಬ್ಯಾಂಕ್‌ಗುಮಾಸ್ತ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಈ ಭಾಗದ ಯುವಜನತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವಕಾಶಗಳನ್ನು ಪಡೆಯಲು ಸಹಕರಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದು, ಮೊದಲು ಹೆಸರು ನೋಂದಾಯಿಸುವ 100 ಜನರಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತರುತರಬೇತಿಯ ಪ್ರಯೋಜನವನ್ನು ಪಡೆಯಬಹುದು ಎಂದವರು ಮಾಹಿತಿ ತಿಳಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶ ಬಯಸುವವರಿಗೆ ರೋಟರಿ ಕ್ಲಬ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುವರ್ಣಾವಕಾಶ ನೀಡಿದೆ. ಬಂಟ್ವಾಳ ಪರಿಸರದವರೇ ತ್ವರೆ ಮಾಡಿ, ಕರೆ ಮಾಡಿ 9845669640.
Be the first to comment on "ಬ್ಯಾಂಕಿಂಗ್ ಪರೀಕ್ಷೆಗೆ ರೋಟರಿ ಬಂಟ್ವಾಳದಿಂದ 23ರಂದು ತರಬೇತಿ"