ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಯಲ್ಲಿ ಅನಾಥೆ ವೃದ್ದೆ ಪೊಡಿ ಮುಗೇರ್ತಿಗೆ ಸೋಮವಾರ ಸಂಜೆ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಉಚಿತ ಗ್ಯಾಸ್ ವಿತರಣೆ ಹಾಗೂ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಇದರೊಂದಿಗೆ ಪೊಡಿ ಮುಗೇರ್ತಿಯ ಕತ್ತಲ ಬದುಕಿಗೆ ವಿದ್ಯುತ್ ಬೆಳಕು ಹರಿದಿದ್ದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸ್ಪಂದಿಸಿ, ರೋಟರಿ ಕ್ಲಬ್ ಮೂಲಕ ಪೊಡಿ ಮುಗೇರ್ತಿಗೆ ಈ ವ್ಯವಸ್ಥೆ ಕಲ್ಪಿಸಿದ್ದಾರೆ.
ಅಮ್ಟಾಡಿ ಗ್ರಾಮದ ಕೆಂಪು ಗುಡ್ಡೆ ನಿವಾಸಿ ದಿ.ಕುಕ್ಕ ಮುಗೇರ ಪತ್ನಿ ಪೊಡಿ ಮುಗೇರ್ತಿ (67) ಅವರು ವಿದ್ಯುದ್ದೀಪವಿಲ್ಲದೆ ಕತ್ತಲ ಕೋಣೆಯಲ್ಲಿದ್ದರು. ಈ ಗ್ರಾಮದ ಬೀಟ್ ಪೋಲೀಸರಾದ ಮೋಹನ್ ಮತ್ತು ಮಲ್ಲಿಕಾ ಅವರು ಬೀಟ್ ರೌಂಡ್ಸ್ ನಲ್ಲಿದ್ದಾಗ ಒಂಟಿ ವೃದ್ದೆಯ ಬದುಕು ಕಂಡು ಈ ವಿಚಾರವನ್ನು ನಗರ ಠಾಣೆ ಯ ಎಸ್.ಐ.ಚಂದ್ರಶೇಖರ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿ ಅವರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಬಳಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ರೋಟರಿಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಗ್ಯಾಸ್ ಸಂಪರ್ಕ,ಸೋಲಾರ್ ದೀಪ ಅಳವಡಿಸಿದ್ದಾರೆ.
ಬಂಟ್ವಾಳ ಭದ್ರಾ ಗ್ಯಾಸ್ ಏಜೆನ್ಸಿಯ ಮಾಲೀಕರೂ ಆದ ಮಂಜುನಾಥ ಆಚಾರ್ಯ ನೀಡಿದ ಭರವಸೆಯಂತೆ ವೃದ್ದೆ ಪೊಡಿ ಮುಗೇರ್ತಿಯ ನಿವಾಸಕ್ಕೆ ಉಚಿತ ಗ್ಯಾಸ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಈ ಸಂದರ್ಭ ಬಂಟ್ಚಾಳ ನಗರ ಪೊಲೀಸ್ ಠಾಣೆಯ ಎಸ್ ಐ ಚಂದ್ರಶೇಖರ್ . ಬೀಟ್ ಪೊಲೀಸ್ ಸಿಬ್ಬಂದಿ ಮೋಹನ್, ವಿಜಯ ರೋಟೆರಿಯನ್ ಗಳಾದ ಮೇಘಾ ಆಚಾರ್ಯ, ಪ್ರಭಾಕರ ಪ್ರಭು, ಸ್ಥಳೀಯ ನಿವಾಸಿ ಕಮಾಲಾಕ್ಷ ಅವರು ಉಪಸ್ಥಿತರಿದ್ದರು.
Be the first to comment on "ಕತ್ತಲ ಬದುಕಿಗೆ ಬೆಳಕು ನೀಡಿದ ರೋಟರಿ ಕ್ಲಬ್ ಬಂಟ್ವಾಳ"