ಕೃಷ್ಣತತ್ತ್ವವನ್ನು ಮೈಗೂಡಿಸುವುದರಿಂದ ಆತ್ಮವಿಶ್ವಾಸ – ಒಡಿಯೂರು ಶ್ರೀ

ಭಗವಾನ್ ಶ್ರೀಕೃಷ್ಣನು ಜಗತ್ತಿಗೇ ಅಧ್ಯಾತ್ಮದ ಬೆಳಕನ್ನು ತೋರಿಸಿದವನು. ಕೃಷ್ಣತತ್ತ್ವವನ್ನು ಮೈಗೂಡಿಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಭಾರತದ ಸಂಸ್ಕೃತಿಯ ಅಂದ-ಚಂದವನ್ನು ಮನಗಾಣಬೇಕಾದರೆ ಮಹಾಭಾರತ, ರಾಮಾಯಣವನ್ನು ಅರಿತುಕೊಳ್ಳಬೇಕು. ನಾವೆಲ್ಲ ಕೃಷ್ಣನ ಕೈಯಲ್ಲಿರುವ ಬೆಣ್ಣೆಗಳಾಗಬೇಕು; ಅಂದರೆ ನಿಷ್ಕಲ್ಮಶ, ಪರಿಶುದ್ಧತೆಯ, ಪ್ರೇಮತತ್ತ್ವದ ಮನೋಭಾವದವರಾಗಬೇಕು. ಕೊಳಲ ಪ್ರತೀಕವಾಗಿ ಷಡ್ವೈರಿಗಳನ್ನು ದೂರೀಕರಿಸಿ ಸುಶ್ರಾವ್ಯಯುತ ಜೀವನವು ನಮ್ಮದಾಗಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.

ಜಾಹೀರಾತು

ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜೈ ಗುರುದೇವ ಕಲಾಕೇಂದ್ರ ಒಡಿಯೂರು ಇವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಿದ್ದ ಮುದ್ದುಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಆಶೀರ್ವಚನಗೈದರು.
ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಧ್ವಿ ಶ್ರೀ ಮಾತಾನಂದಮಯೀಯವರು ಶ್ರೀ ಕೃಷ್ಣನ ನೆನಪು ಸದಾ ನಮ್ಮಲ್ಲಿದ್ದರೆ ಚೈತನ್ಯ ತುಂಬುತ್ತದೆ. ಅವನ ಸ್ಮರಣೆಯಿಂದಲೂ ಅನುಸ್ಮರಣೆಯೇ ಶ್ರೇಷ್ಠವಾದುದು. ಆ ಮೂಲಕ ನಮ್ಮಲ್ಲಿರುವ ಕ್ಲೇಶಗಳು ದೂರಾಗಿ ಬದುಕಿನಲ್ಲಿ ಸುಖ ಪ್ರಾಪ್ತಿಯಾಗುತ್ತದೆ. ಕೃಷ್ಣ ಎಂದರೆ ಆಕರ್ಷಣೆ, ಸಂತೋಷವನ್ನು ಸೃಷ್ಟಿ ಮಾಡುವ ವ್ಯಕ್ತಿತ್ವ, ಅಂತೆಯೇ ದುರ್ಭಾವನೆಗಳನ್ನು ಹೋಗಲಾಡಿಸಿ ಸದ್ಭಾವನೆಗಳನ್ನು ಪ್ರಚೋದಿಸುವ ಶಕ್ತಿ ಇದೆ. ಮುದ್ದು ಮಕ್ಕಳೆಂದರೆ ಮುಗ್ಧತೆ. ಮುಗ್ಧತೆ ಎಲ್ಲಿದೆಯೋ ಅಲ್ಲಿ ಭಗವಂತನ ಆವಾಸ. ಈ ಮೂಲಕ ಶ್ರೀಕೃಷ್ಣನನ್ನು ಮಕ್ಕಳಲ್ಲಿ ಕಾಣುವಂತಹ ಮುದ್ದುಕೃಷ್ಣ ವೇಷ ಸ್ಪರ್ಧೆಯ ಆಚರಣೆ ವೈಶಿಷ್ಟ್ಯಪೂರ್ಣವಾದುದು. ಕೃಷ್ಣನ ಬದುಕೇ ಸಮಾಜಕ್ಕೊಂದು ಆದರ್ಶ ಎಂದರು.
ಯಶವಂತ್ ವಿಟ್ಲ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಕಾರ್ಯದರ್ಶಿ ಆಶಾ ಭಾಸ್ಕರ ಶೆಟ್ಟಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಪದ್ಮನಾಭನ್ ಚೆರುವತ್ತೂರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ಯಶಸ್ವಿನಿ ಹಾಗೂ ತೇಜಸ್ವಿನಿ ಪ್ರಾರ್ಥನೆಗೈದರು. ಜೈ ಗುರುದೇವ್ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ್ ಶೆಟ್ಟಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಹಾಗೂ ಮುದ್ದುಕೃಷ್ಣ ವೇಷ ಸ್ಪರ್ಧೆಯ ವಿಜೇತರ ಪಟ್ಟಿ ವಾಚಿಸಿದರು. ಶ್ರೀ ಸಂತೋಷ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಶರತ್ ಆಳ್ವ ಹಾಗೂ ಶ್ರದ್ಧಾ ಜೆ. ಶೆಟ್ಟಿ ಒಡಿಯೂರು ಇವರು ಸಹಕರಿಸಿದರು.
ಮುದ್ದುಕೃಷ್ಣ ವೇಷ ಸ್ಪರ್ಧೆಯ ಗುರುಕುಲ (ಎಲ್.ಕೆ.ಜಿ. & ಯು.ಕೆ.ಜಿ.) ವಿಭಾಗದಲ್ಲಿ ಸನತ್ ಕುಮಾರ್ ಕನ್ಯಾನ ಪ್ರಥಮ ಹಾಗೂ ಪ್ರಣಿತ್ ಮತ್ತು ಮನಸ್ವಿ ದ್ವಿತೀಯ ಬಹುಮಾನ ಪಡೆದರು. ಒಂದನೇ ತರಗತಿ ವಿಭಾಗದಲ್ಲಿ ಸೌರವ್ ಎನ್.ಡಿ. ನಂದರಬೆಟ್ಟು ಪ್ರಥಮ ಹಾಗೂ ಶ್ರೀಜನ್ಯಾ ಶಿರಂತಡ್ಕ ದ್ವಿತೀಯ ಬಹುಮಾನ ಪಡೆದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕೃಷ್ಣತತ್ತ್ವವನ್ನು ಮೈಗೂಡಿಸುವುದರಿಂದ ಆತ್ಮವಿಶ್ವಾಸ – ಒಡಿಯೂರು ಶ್ರೀ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*