ಯುವ ಜನತೆಯಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಜೇಸಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.
ಜೇಸೀ ಐ ಜೋಡುಮಾರ್ಗ ನೇತ್ರಾವತಿಯ ಸಪ್ತ ಲಹರಿ ಜೇಸೀ ಸಪ್ತಾಹ 2018 ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ, ಯುವಜನತೆಗೆ , ಸಮುದಾಯದ ಉನ್ನತಿಗೆ ಶ್ರಮಿಸಿದ ಜೇಸೀ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ ವಿಜಯ ಬ್ಯಾಂಕ್ ತುಂಬೆ ಇದರ ವ್ಯವಸ್ಥಾಪಕರಾದ ವೈ ಆರ್ ದಾಮ್ಲೆ ಜೇಸೀ ಸಪ್ತಾಹದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಆಚಾರ್, ಲಕ್ಷ್ಮಿ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್ ಬಿ ಶೆಟ್ಟಿ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ಸಂಪನ್ಮೂಲ ವ್ಯಕ್ತಿ ಐ ಕುಶಾಲಪ್ಪ ಗೌಡ ಬೆಳ್ತಂಗಡಿ, ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್, ಕಾರ್ಯದರ್ಶಿ ಹರ್ಷರಾಜ್ ಸಿ. ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್,
ಕಾರ್ಯಕ್ರಮ ನಿರ್ದೇಶಕ ರವೀಂದ್ರ ಕುಕ್ಕಾಜೆ ಉಪಸ್ತಿತರಿದ್ದರು.
ಪೃಥ್ವಿ ರೈ ಪ್ರಾರ್ಥನೆ ನೆರವೇರಿಸಿದರು. ಜೇಸಿ ಪೂರ್ವಾಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದ್ದರು.
Be the first to comment on "ಸಪ್ತಲಹರೀ – ಜೇಸಿ ಸಪ್ತಾಹ ಉದ್ಘಾಟನೆ"