13 ನಾಮಪತ್ರ ಹಿಂತೆಗೆತ
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಿಂಪಡೆಯುವ ದಿನವಾದ ಗುರುವಾರ ಬಂಟ್ವಾಳದಲ್ಲಿ ಒಟ್ಟು 13 ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದಿದ್ದಾರೆ.
ಈಗ ಕಣದಲ್ಲಿ ಕಾಂಗ್ರೆಸ್ ನ 25, ಬಿಜೆಪಿಯ 27, ಜೆಡಿಎಸ್ ನ 5, ಎಸ್.ಡಿ.ಪಿ.ಐ.ನ 12, ಸಿಪಿಐ 1, ಪಕ್ಷೇತರ 1 ಸೇರಿ ಒಟ್ಟು 71 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇವರ ಪೈಕಿ ಕಾಂಗ್ರೆಸ್ ಜೆಡಿಎಸ್ ನ ಒಂದು ಅಭ್ಯರ್ಥಿ ಮತ್ತು ಸಿಪಿಐನ ಒಂದು ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
ಪುರಸಭೆಗೆ ಒಟ್ಟು 101 ನಾಮಪತ್ರಗಳು ಸಲ್ಲಿಕೆಯಾಗಿದ್ದು, 84 ನಾಮಪತ್ರಗಳು ಪರಿಶೀಲನೆ ಬಳಿಕ ಅಂಗೀಕಾರಗೊಂಡಿದ್ದವು.
ಬಿಜೆಪಿಯ 43, ಕಾಂಗ್ರೆಸ್ ನ 25, ಜೆಡಿಎಸ್ ನ 5, ಸಿಪಿಐನ 2, ಎಸ್.ಡಿ.ಪಿ.ಐ.ನ 22 ಮತ್ತು ಪಕ್ಷೇತರರು 4 ಮಂದಿ ಸೇರಿ ಒಟ್ಟು 99 ಮಂದಿಯಿಂದ 101 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಬಿಜೆಪಿಯ 16, ಸಿಪಿಐನ 1 ಸೇರಿ ಒಟ್ಟು 17 ನಾಮಪತ್ರಗಳು ತಿರಸ್ಕೃತಗೊಂಡಿದ್ದವು.
ಯಾರೆಲ್ಲ ಹಿಂತೆಗೆತ:
ಎಸ್.ಡಿ.ಪಿ.ಐನ 10, ಪಕ್ಷೇತರ 2, ಸ್ವತಂತ್ರ 1 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡರು.
ಪಕ್ಷೇತರ ಅಭ್ಯರ್ಥಿ ಹರೀಶ್ ಬಿ (9ನೇ ವಾರ್ಡ್) ಎಸ್.ಡಿ.ಪಿ.ಐನ ಬದಲಿ ಅಭ್ಯರ್ಥಿಗಳಾದ ವಾರ್ಡ್ 1ರ ಆಸಿದ್, 8ರ ಇರ್ಷಾದ್ ಆಲಿ, 13ರ ಅಮೀನಮ್ಮ, 14ರ ಮುಬೀನಾ, 16ರ ಮಹಮ್ಮದ್ ಇಕ್ಬಾಲ್, 17ರ ಅಕ್ಬರಾಲಿ, 18ನೇ ವಾರ್ಡಿನ ಅಬುಬಕ್ಕರ್ ಸಿದ್ದಿಕ್, 19ರ ಮಹಮ್ಮದ್ ಮುಸ್ತಾಕ್, 23ರ ಮಹಮ್ಮದ್ ಇಮ್ರಾನ್, 24ರ ಇಸ್ಮಾಯಿಲ್ ಬಾವ, 24ರ ಪಕ್ಷೇತರ ಮಹಮ್ಮದ್ ಅಮಾನುಲ್ಲ ಮತ್ತು 23ರ ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಇರ್ಫಾನ್ ನಾಮಪತ್ರ ಹಿಂತೆಗೆದಿದ್ದಾರೆ.
ಹೇಗಿದೆ ಚುನಾವಣೆ:
ಪುರಸಭೆಯ ಕಳೆದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡೊದಿತ್ತು. 23 ಸ್ಥಾನಗಳಲ್ಲಿ 13 ಕಾಂಗ್ರೆಸ್ 5 ಬಿಜೆಪಿ, 3 ಎಸ್ ಡಿ ಪಿ ಐ, 1 ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು. ಮೊದಲ ಎರಡೂವರೆ ವರ್ಷದ ಅವಧಿಗೆ ವಸಂತಿ ಚಂದಪ್ಪ ಅಧ್ಯಕ್ಷರಾಗಿ, ಯಾಸ್ಮೀನ್ ಉಪಾಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದರೆ, ಎರಡನೇ ಅವಧಿಗೆ ರಾಮಕೃಷ್ಣ ಆಳ್ವ ಅಧ್ಯಕ್ಷರಾಗಿ ಮಹಮ್ಮದ್ ನಂದರ ಬೆಟ್ಟು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ನಗರಸಭೆಯಾಗುವ ಪ್ರಸ್ತಾಪ ಇತ್ತಾದರೂ ಅದು ಈಡೇರದೆ ಬರಿ ಪುರಸಭೆಯಾಗಿಯೇ ಉಳಿದಿದ್ದು ವಾರ್ಡ್ ಗಳನ್ನು ವಿಸ್ತರಿಸಲಾಗಿದೆ. 23 ವಾರ್ಡ್ ಗಳಿದ್ದ ಪುರಸಭೆ ಪ್ರಸ್ತುತ ವರ್ಷದಿಂದ 4 ವಾರ್ಡುಗಳನ್ನು ಹೆಚ್ಚಿಸಿ ಕೊಂಡು 27ಕ್ಕೇರಿದೆ.
Be the first to comment on "ಬಂಟ್ವಾಳ ಪುರಸಭೆ: ಕಣದಲ್ಲಿದ್ದಾರೆ 71 ಅಭ್ಯರ್ಥಿಗಳು"