ಶಂಭೂರು ಎಎಂಆರ್ ಡ್ಯಾಂ ನಿಂದ ಸೈರನ್ ಮೊಳಗುತ್ತಿದ್ದಂತೆಯೇ ನೇತ್ರಾವತಿ ಬಿರುಸು ಕಾಣಿಸಿಕೊಳ್ಳುತ್ತದೆ. ಅಲ್ಲಿದ್ದ ಕಸ, ಕಡ್ಡಿಗಳನ್ನು ನದಿಯ ಪಕ್ಕದಲ್ಲಿದ್ದ ಜಾಗಕ್ಕೆ ಎಸೆಯುತ್ತದೆ. ಹೀಗೆ ಪಾಣೆಮಂಗಳೂರಿನ ಆಲಡ್ಕ, ಬಂಟ್ವಾಳದ ತೀರ ಪ್ರದೇಶಗಳಾದ ಕಂಚುಕಾರಪೇಟೆ, ಬಡ್ಡಕಟ್ಟೆ ಹಾಗೂ ಸನಿಹದ ಪ್ರದೇಶಗಳೀಗ ಜಲಾವೃತಗೊಂಡಿವೆ. ಈ ಚಿತ್ರಗಳು ಬಂಟ್ವಾಳ ಮತ್ತು ಗೂಡಿನಬಳಿಯನ್ನು ಸಂಪರ್ಕಿಸುವ ಕಂಚುಕಾರಪೇಟೆಯದ್ದು. ಇಲ್ಲೇ ನದಿಯ ಮಟ್ಟ ಅಳೆಯುವ ಮಾಪನವಿದೆ. ಚಿತ್ರ ಸೆರೆಹಿಡಿದ ಸಂದರ್ಭ 9.6 ಅಡಿಯಲ್ಲಿ ನೇತ್ರಾವತಿ ನೀರು ಹರಿಯುತ್ತಿತ್ತು. ಇದಿನ್ನೂ ಜಾಸ್ತಿಯಾಗಬಹುದು ಅಥವಾ ಕಡಿಮೆಯಾಗಲೂಬಹುದು. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆಯೇ ಹೊರತು ಯಾವ ಪ್ರಭಾವ, ವಶೀಲಿಯೂ ಅಲ್ಲ!!! ಇದನ್ನು ನಾನು ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವವರು ಈ ವಿಷಯದಲ್ಲಂತೂ ಇಲ್ಲ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಮೊಳಗುತ್ತಿದೆ ಸೈರನ್, ಡ್ಯಾಂನಿಂದ ಜಲಧಾರೆ, ಬಂಟ್ವಾಳ ತಗ್ಗು ಪ್ರದೇಶಗಳಲ್ಲಿ ಇಳಿದಿಲ್ಲ ನೆರೆ"
Be the first to comment on "ಮೊಳಗುತ್ತಿದೆ ಸೈರನ್, ಡ್ಯಾಂನಿಂದ ಜಲಧಾರೆ, ಬಂಟ್ವಾಳ ತಗ್ಗು ಪ್ರದೇಶಗಳಲ್ಲಿ ಇಳಿದಿಲ್ಲ ನೆರೆ"