ದೇಶ ವಿಭಜನೆಯಾಗಲು ಕಾಂಗ್ರೆಸ್ ನೀತಿ ಕಾರಣ, ಮತಕ್ಕಾಗಿ ಅಲ್ಪಸಂಖ್ಯಾತ ರನ್ನು ಒಲ್ಯೆಕೆ ಮಾಡಲು ಹಿಂದೂಗಳ ದಮನ ಕಾರ್ಯ ನಡೆಯುತ್ತಿದೆ ಎಂದು ಎಂದು ಬೆಂಗಳೂರು ಸಾಮಾಜಿಕ ಕಾರ್ಯಕರ್ತ ಗಿರಿಧರ ಉಪಾಧ್ಯಾಯ ಹೇಳಿದರು.
ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಕೈಕಂಬ ಪೊಳಲಿ ದ್ವಾರದಿಂದ ಬಿಸಿರೋಡು ರಕ್ತೇಶ್ವರಿ ದೇವಿ ದೇವಸ್ಥಾನ ದ ವರೆಗೆ ಪಂಜಿನ ಮೆರವಣಿಗೆ ಮಂಗಳವಾರ ರಾತ್ರಿ ನಡೆಯಿತು. ಬಳಿಕ ಬಿ.ಸಿ.ರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನ ದ ಬಳಿಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆದ ಸಂದರ್ಭ ಅವರು ಮಾತನಾಡಿದರು.
ಕಾಶ್ಮೀರ ಸಮಸ್ಯೆ ಹುಟ್ಟು ಹಾಕಲು ನೆಹರು ಅವರೇ ಕಾರಣ, ದೇಶದ ಜನಸಂಖ್ಯೆ ಹೆಚ್ಚಾದ ಸಂಸ್ಕೃತಿಯೂ ಬದಲಾಗುತ್ತೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಹಿಂದೂ ಧರ್ಮದ ಮೇಲಿನ ದಾಳಿಗಳ ಕುರಿತು ಸಮಾಜ ಜಾಗೃತರಾಗಿರಬೇಕು ಎಂದರು.
ಹಿಂದೂ ಸಮಾಜ ಎಲ್ಲರ ನ್ನು ಸಮಾನವಾಗಿ ನೋಡಿದ ವಿಶಾಲ ಮನೋಭಾವ ದ ಸಮಾಜ. ಹಿಂದೂ ಧರ್ಮ ಎಲ್ಲಿಯವರೆಗೆ ಬಹುಸಂಖ್ಯಾತ ರಾಗುತ್ತದೋ ಅಲ್ಲಿಯವರೆಗೆ ಇತರರು ಆಕ್ರಮಣ ಮಾಡಲು ಸಾಧ್ಯವಿಲ್ಲ. ನಾವೆಲ್ಲಾ ಒಂದಾಗಿ ಬೇಧಬಾವ ಮರೆತು, ಭಾವನೆಗಳ ಮೂಲಕ ಹಿಂದೂ ಸಮಾಜ ದ ಪುನರುತ್ಥಾನದ ಬಗ್ಗೆ ಕೆಲಸ ಮಾಡಿದಾಗ ವಿಶ್ವಗುರು ಅಗಲು ಸಾಧ್ಯ ಎಂದ ಅವರು, ಭವ್ಯವಾದ ದೇಶ ವನ್ನು ಕಟ್ಟ ಲು ನಾವೆಲ್ಲರೂ ಒಂದಾಗೋಣ ಎಂದರು.
ಯುವ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಕಾರ್ಯ ಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಅಖಂಡ ಭಾರತದ ನಿರ್ಮಾಣ ದ ಕನಸು ಸಾಕಾರಗೊಳ್ಳಲು ಸಂಘಟನೆಯ ಪಾತ್ರ ಮುಖ್ಯವಾಗಿ ದೆ. ಹಿಂದೂ ತನವನ್ನು ಹಿಂದೂ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಂಘಟಿತರಾಗಿ ದೇಶದ ಉಳಿವಿಗಾಗಿ ಶ್ರಮವಹಿಸಿ ಎಂದು ಹೇಳಿದರು.
ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಹರಿಕ್ರಷ್ಣ ಬಂಟ್ವಾಳ, ಆಶೋಕ್ ಶೆಟ್ಟಿ ಸರಪಾಡಿ, ಪ್ರಮುಖರಾದ ಹಿಂಜಾವೇ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿಸಿರೋಡು, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾದ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಘಟಕದ ಅದ್ಯಕ್ಷ ಅರುಣ್ ಕುಮಾರ್ ನುಲಿಯಾಲು ಗುತ್ತು,ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕದ ಗೌರವಾದ್ಯಕ್ಷ ವಿಠಲ ಕೋಟ್ಯಾನ್, ಹಿಂದೂ ಜಾಗರಣ ಮಹಿಳಾ ಘಟಕದ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಹಿಂದೂ ಜಾಗರಣ ವೇದಿಕೆ ಬಂಟ್ವಾಳ ಅಧ್ಯಕ್ಷ ಚಂದ್ರ ಕಲಾಯಿ, ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಕಿರಣ್ ಶೆಟ್ಟಿ ಮೂರ್ಜೆ ಪ್ರತಿಜ್ಞೆ ವಿಧಿ ಬೋಧಿಸಿದರು. ಪುಪ್ಷರಾಜ್ ಕಮ್ಮಾಜೆ ಸ್ವಾಗತಿಸಿ ಸರು. ಹರ್ಷಾ ಅಮ್ಟಾಡಿ ವಂದಿಸಿದರು. ಸುರೇಶ್ ಎಸ್ ನಾವೂರ ಕಾರ್ಯಕ್ರಮ ನಿರೂಪಿಸಿದರು.
Be the first to comment on "ದೇಶ ವಿಭಜನೆಗೆ ಕಾಂಗ್ರೆಸ್ ನೀತಿ ಕಾರಣ: ಗಿರಿಧರ ಉಪಾಧ್ಯಾಯ"