ದ.ಕ.ಜಿಲ್ಲಾ ಪೋಲೀಸ್, ಬಂಟ್ವಾಳ ಸಂಚಾರ ಪೋಲೀಸ್ ಠಾಣೆ ಮತ್ತು ಎನ್.ಸಿ.ಸಿ. ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಎಸ್.ವಿ.ಎಸ್. ಆಶ್ರಯದಲ್ಲಿ ಸಂಚಾರ ನಿಯಂತ್ರಣ ಹಾಗೂ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬಂಟ್ವಾಳ ಎಸ್.ವಿ.ಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ನಿಯಂತ್ರಣ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.
ಮುಖ್ಯ ಅತಿಥಿ ಅಡಿಸನಲ್ ಎಸ್ .ಪಿ.ಸಜಿತ್ ಮಾತನಾಡಿ ರಸ್ತೆಯಲ್ಲಿ ಸಂಚರಿಸುವಾಗ ಸುರಕ್ಷತೆಯ ಬಗ್ಗೆ ಬೇಕಾದ ಕ್ರಮಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿ ಯಾಗಿ ಅಗಮಿಸಿ ಮಾತನಾಡಿದ ಸಂಚಾರಿ ಪೋಲೀಸ್ ಎಸ್.ಐ. ಯಲ್ಲಪ್ಪ ರಸ್ತೆ ನಿಯಮಗಳನ್ನು ಪ್ರತಿಯೊಬ್ಬರು ಬಳಸಿ, ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ , ಅಪರಾಧ ವಿಭಾಗದ ಎಸ್ ಐ ಹರೀಶ್, ಯೋಜನಾಧಿಕಾರಿ ಕಿಟ್ಟು ರಾಮಕುಂಜ, ಎನ್.ಸಿ.ಸಿ.ಅಧಿಕಾರಿ ಸುಂದರ್ ಉಪಸ್ಥಿತರಿದ್ದರು. ಡಾ ಮಂಜುನಾಥ ಉಡುಪ ಸ್ವಾಗತಿಸಿ , ಎನ್.ಸಿ.ಸಿ.ಅಧಿಕಾರಿ ಸುಂದರ್ ವಂದಿಸಿದರು.
Be the first to comment on "ಎಸ್.ವಿ.ಎಸ್. ಕಾಲೇಜಿನಲ್ಲಿ ಸಂಚಾರ ಸುರಕ್ಷತೆಯ ಕುರಿತು ಮಾಹಿತಿ"