ಕಂದಾಯ ಇಲಾಖೆಯ ವತಿಯಿಂದ ಪ್ರಾಕೃತಿಕ ವಿಕೋಪ ನಿಧಿಯಡಿ ಪರಿಹಾರದ ಚೆಕ್ ಅನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ಶನಿವಾರ ವಿತರಿಸಿದರು.
21 ಫಲಾನುಭವಿಗಳಿಗೆ ಒಟ್ಟು 1,12,358 ರೂಗಳ ಸಹಾಯದ ಚೆಕ್ ವಿತರಿಸಿದ ಬಳಿಕ ಮಾತನಾಡಿದ ಶಾಸಕರು, ಮಳೆಹಾನಿ ಸಹಿತ ಪ್ರಾಕೃತಿಕ ವಿಕೋಪದಡಿ ಸಾರ್ವಜನಿಕರ ಆಸ್ತಿ ಹಾನಿಯ ಅಂದಾಜು ಮೊತ್ತಕ್ಕಿಂತ ಕಡಿಮೆ ಮೊತ್ತದ ಚೆಕ್ ಅನ್ನು ಸರಕಾರದ ಮಾನದಂಡ ಪ್ರಕಾರ ವಿತರಿಸಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಪ್ರಾಕೃತಿಕ ವಿಕೋಪದ ಪರಿಹಾರದ ಮಾನದಂಡವನ್ನು ಬದಲಾಯಿಸಿ ಪರಿಹಾರದ ಮೊತ್ತ ಹೆಚ್ಚಳಕ್ಕೆ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಸಂತ್ರಸ್ತರಾದ ಜಯರಾಮ ಕೊಳ್ನಾಡು, ಖಾಸಿಂ ಕನ್ಯಾನ, ಕೇಶವ ನಾಯ್ಕ ಕನ್ಯಾನ, ಗುಲಾಬಿ ವಿಟ್ಲ ಪಡ್ನೂರು, ವಾರಿಜ ತೆಂಕ ಬೆಳ್ಳೂರು, ಸುಧಾಕರ ಬಡಗಬೆಳ್ಳೂರು, ಶಕುಂತಲಾ ಬರಿಮಾರು, ಅರ್ಪಿತಾ ಬರಿಮಾರು, ಲೀಲಾವತಿ ಕಡೇಶ್ವಾಲ್ಯ, ಗುರುವಪ್ಪ ಕಡೇಶ್ವಾಲ್ಯ, ಶಶಿಕಲಾ ಬರಿಮಾರು, ಐಸಾಕ್ ಡಿ ಕುನ್ಹ ಕಡೇಶ್ವಾಲ್ಯ,ಅಬ್ಬಸಾಲಿ ಅಮ್ಮುಂಜೆ, ಸರೋಜಿನಿ ಕರಿಯಂಗಳ, ಇಂದಿರಾ ಬಾಳ್ತಿಲ, ಸುಶೀಲಮ್ಮ ಮಂಚಿ, ಉಮಾವತಿ ಕಡೇಶ್ವಾಲ್ಯ, ಜ್ಯೂಲಿಯನ್ ಮಥಾಯಿಸ್ ಅಮ್ಟಾಡಿ, ಜಾನಕಿ ನರಿಕೊಂಬು, ಹೇಮಾವತಿ ನರಿಕೊಂಬು, ವೀರಮ್ಮ ನರಿಕೊಂಬು, ಶ್ರೀಶೈಲ ಕಾವಳಪಡೂರು, ಪದ್ಮಾವತಿ ಸಜಿಪ ಮುನ್ನೂರು ಇವರಿಗೆ ಶಾಸಕರು ಪರಿಹಾರ ಧನದ ಚೆಕ್ ವಿತರಿಸಿದರು. ಈ ಸಂದರ್ಭ ಪುರಸಭಾ ಸದಸ್ಯರಾದ ಎ. ಗೋವಿಂದ ಪ್ರಭು ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ರೆವೆನ್ಯೂ ಇನ್ಸ್ ಪೆಕ್ಟರ್ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಮಳೆಹಾನಿ: 21 ಫಲಾನುಭವಿಗಳಿಗೆ 1.12 ಲಕ್ಷ ರೂ. ಮೊತ್ತದ ಚೆಕ್ ವಿತರಣೆ"