ದ.ಕ, ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂದು ಹಜ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ, ಆಹಾರ ಸಚಿವ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಫರಂಗಿಪೇಟೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನೂತನವಾಗಿ ಸ್ಥಾಪಿಸಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯ ಉದ್ಘಾಟಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ಟುಡೇ ಫೌಂಡೇಶನ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಸಚಿವರಾದ ಝಮೀರ್ ಅಹ್ಮದ್ ಹಾಗೂ ಯು.ಟಿ.ಖಾದರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಾಲಾ ಮಕ್ಕಳಿಗೆ ಉಚಿತ ಬಾಗ್ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.
ಟುಡೇ ಫೌಂಡೇಶನ್‌ನ ಅಧ್ಯಕ್ಷ ಉಮರ್ ಫಾರೂಕ್ ಹಾಗೂ ಇನ್ನಿತರ ಸದಸ್ಯರನ್ನು ಸಚಿವದ್ವಯರು ಅಭಿನಂದಿಸಿದರು. ವೇದಿಕೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯ ಶಾಹುಲ್ ಹಮೀದ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷ ಲಿಡಿಯಾ ಪಿಂಟೋ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಕಾರ್ಯದರ್ಶಿ ಯೂಸುಫ್ ಅಲಂಕಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಹಿರಿಯಾರಾದ ಎಫ್.ಎ. ಖಾದರ್, ಹಿದಾಯ ಪೌಂಡೇಶನ್ ಅಧ್ಯಕ್ಷ ಹನೀಫ್ ಗೋಳ್ತಮಜಲ್, ಶಾಲಾ ಮುಖ್ಯೋಪಾಧ್ಯಾಯಿನಿ ಶಕುಂತಳಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಸಿರ್, ಇಸ್ಮಾಯಿಲ್ ಕೆ.ಇ.ಎಲ್, ಸೇವಾಂಜಲಿ ಮುಖ್ಯಸ್ಥ ಕೃಷ್ಣಕುಮಾರ್ ಪೂಂಜಾ, ಪ್ರಕಾಶ್ ಶೆಟ್ಟಿ, ಗ್ರಾಪಂ ಸದಸ್ಯರಾದ ಹಾಶಿರ್ ಪೇರಿಮಾರ್, ಮುಹಮ್ಮದ್ ಮೋನು, ಇಕ್ಬಾಲ್ ಸುಜೀರ್, ರಿಯಾಝ್ ಕುಂಪನಮಜಲ್, ಸಂತೋಷ್, ನೆತ್ತರೆಕೆರೆ, ಝೀನತ್ ಕುಂಜತ್ಕಳ, ಬಾಸ್ಕರ್ ರೈ ಕುಂಜತ್ಕಳ, ರಝೀಯಾ ಫರಂಗಿಪೇಟೆ, ಹುಸೈನ್ ಎಂ, ನಝೀರ್ ಹತ್ತನೇಮೈಲ್‌ಕಲ್ಲು, ಮುಮ್ತಾಝ್ ಸುಜೀರ್, ರಶೀದಾ ಬಾನು, ಸುಜಾತಾ ಮಾರಿಪ್ಪಳ್ಳ, ರೆಹನಾ ಮಾರಿಪ್ಪಳ್ಳ, ಲವೀನಾ ಡಿಸೋಜಾ ಕುಂಪನಮಜಲ್, ಜಯಂತಿ ಕುಂಡೆಲ್, ಸಂತೋಷ್ ನೆತ್ರೆಕೆರೆ, ಮನೋಜ್ ಆಚಾರ್ಯ ಕ್ಯಂಡೆಲ್, ಹೇಮಲತಾ, ಮಾಜಿ ತಾಪಂ ಸದಸ್ಯ ಇಕ್ಬಾಲ್ ದರ್ಬಾರ್, ಮಾಜಿ ಅಧ್ಯಕ್ಷ ಪ್ರಕಾಶ್ ಚಹಂದ್ರ ರೈ, ಝಾಹಿರ್ ಅಬ್ಬಾಸ್ ಉಪಸ್ಥಿತರಿದ್ದರು.
ಉಮರ್ ಫಾರೂಕ್ ಸ್ವಾಗತಿಸಿ, ಶಾಲೆಯ ಹಾಗೂ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದರು. ಅಬ್ದುಲ್ ಹನೀಫ್ ನಿರೂಪಿಸಿದರು.
Be the first to comment on "ಶಿಕ್ಷಣಕ್ಕೆ ಮಹತ್ವ ಶ್ಲಾಘನಾರ್ಹ ಕಾರ್ಯ: ಜಮೀರ್ ಅಹ್ಮದ್"