ಬಿಜೆಪಿ ರಾಜ್ಯ ಯುವ ಮೋರ್ಚಾ ಕರೆಯಂತೆ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರಧಾನಿ ನರೇಂದ್ರ ಮೋದಿ (ನಮೋ) ಯೋಜನೆಗಳ ಬಗ್ಗೆ ಜಾಗೃತಿ ಜಾಥಾ ಬಂಟ್ವಾಳ ತಾಲೂಕಿಗೆ ಭಾನುವಾರ ಆಗಮಿಸಿತು.ಪುತ್ತೂರಿನಲ್ಲಿ ಜಾಥಾ ಉದ್ಘಾಟನೆಗೊಂಡಿದ್ದು, ಬಂಟ್ವಾಳದ ಮಾಣಿಯಲ್ಲಿ ಜಾಥಾಕ್ಕೆ ಸ್ವಾಗತ ಕೋರಲಾಯಿತು. ಬಳಿಕ ಹೆದ್ದಾರಿಯಲ್ಲಿ ಸಾಗಿ ಫರಂಗಿಫೇಟೆ ಮೂಲಕ ಮಂಗಳೂರು ಕಡೆಗೆ ಜಾಥಾ ಸಾಗಿತು.
ಮಾಣಿಯಲ್ಲಿ ಬಂಟ್ವಾಳ ಕ್ಷೇತ್ರ ಯುವ ಮೋರ್ಚಾ ನೇತೃತ್ವದಲ್ಲಿ ಜಾಥಾವನ್ನು ಸ್ವಾಗತಿಸಲಾಗಿದ್ದು, ಈ ಸಂದರ್ಭ ಶಾಸಕರಾದ ರಾಜೇಶ್ ನಾಯ್ಕ್, ಕ್ಷೇತ್ರದ ಅಧ್ಯಕ್ಷರಾದ ಬಿ.ದೇವದಾಸ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ರೈ ಮಾಣಿ, ಕಾರ್ಯದರ್ಶಿ ಮೋನಪ್ಪ ದೇವಸ್ಯ, ಜಿಲ್ಲಾ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್, ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಜಿ.ಆನಂದ, ರಮಾನಾಥ ರಾಯಿ, ಸಂತೋಷ್ ರಾಯಿಬೆಟ್ಟು, ವಿನೀತ್ ಶೆಟ್ಟಿ, ಸೀತಾರಾಮ ಪೂಜಾರಿ, ಲೋಹಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ನಮೋ ಜಾಥಾ ಬಂಟ್ವಾಳದಲ್ಲಿ ಸಂಚಾರ"