ಪರಪ್ಪು ಎಸ್ಸೆಸ್ಸೆಫ್ ವತಿಯಿಂದ ರಾಸಾಯನಿಕ ರಹಿತ ಕೃಷಿ ಕುರಿತು ಕ್ಲಾಸ್

ಇರಾ ಗ್ರಾಮದ ಪರಪ್ಪಿನ ಎಸ್ಸೆಸ್ಸಫ್ ವತಿಯಿಂದ ತಿಂಗಳಿಗೊಮ್ಮೆ ಮಹಿಳಾ ಕ್ಲಾಸ್ ನಡೆಯುತ್ತಿದೆ. ಇದರಿಂದ ಧಾರ್ಮಿಕ ಹಾಗೂ ಪ್ರಸುತ್ತ ವಿಷಯಗಳ ಕುರಿತ ಮಾಹಿತಿ ಲಭ್ಯವಾಗುತ್ತದೆ. ಊರಿನ ಮಹಿಳೆಯರನ್ನು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅರಿವು ಮೂಡಿಸುವುದು ಇದರ ಉದ್ದೇಶ. ಇದೇ ನಿಟ್ಟಿನಲ್ಲಿ ಭಾನುವಾರದ ಮಹಿಳಾ ಕ್ಲಾಸ್ ರಾಸಾಯನಿಕ ರಹಿತ ಕೃಷಿಯ ಕುರಿತದ್ದಾಗಿತ್ತು.
ಈಗ ಹಲವಾರು ರೋಗ-ರುಜಿನಗಳಿಗೆ ಕಾರಣವಾದ ನಾವು ಬಳಸುವ ವಿಷಪೂರಿತ ರಾಸಾಯನಿಕ ಸಿಂಪಡಿಸುವ ತರಕಾರಿಗಳನ್ನು ಬಳಸದೆ  ನಮಗೆ ಬೇಕಾದಷ್ಟು ನಮ್ಮ ಮನೆಯಲ್ಲಿ  ಯಾವುದೇ ರಾಸಾಯನಿಕ ಬಳಸದೆ ಅರೊಗ್ಯಕಾರವಾದ ತರಕಾರಿಗಳನ್ನು ಹೇಗೆ ಬೆಳೆಯಬಹುದು ಅನ್ನುವ ಕುರಿತು ನಡೆದ ಸಂವಾದ ವಿಶಿಷ್ಠವಾಗಿತ್ತು
.ಈ ಸಂವಾದವನ್ನು ಪ್ರಗತಿಪರ ಕೃಷಿಕ ಅಬ್ದುಲ್ ಖಾದರ್ ಸಣ್ಣಬೈಲ್ ನಡೆಸಿಕೊಟ್ಟರು. ಕಾರ್ಯಕ್ರಮ ದಲ್ಲಿ ಪರಪ್ಪು ಜುಮಾ ಮಸೀದಿ ಉಸ್ತಾದರಾದ ಅಬ್ದುಲ್ ರಝಾಕ್ ಸಖಾಫಿ,ಹಮೀದ್ ಸಖಾಫಿ (ಸದರ್ ಪರಪ್ಪು) ಉಮ್ಮರ್ ಮದನಿ ಮುರ್ಕಂಙ ಎಸ್ಸಸ್ಸಫ್ ಪರಪ್ಪು ಅಧ್ಯಕ್ಷರಾದ ಅಶ್ರಫ್ ಎಸ್ಟೇಟ್ ಭಾಗವಹಿಸಿದರು.ಉತ್ಸಾಹದಿಂದ ಸಂವಾದ ಅಲಿಸಿದ ಮಹಿಳೆಯರು ಹಲವು ಕೃಷಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು ಕೊನೆಯಲ್ಲಿ ವಿವಿಧ ತಳಿಯ ತರಕಾರಿ ಬೀಜಗಳನ್ನು ನೀಡಿ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಿದರು.
ವರದಿ: ಜಬ್ಬಾರ್ ಪರಪ್ಪು

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಪರಪ್ಪು ಎಸ್ಸೆಸ್ಸೆಫ್ ವತಿಯಿಂದ ರಾಸಾಯನಿಕ ರಹಿತ ಕೃಷಿ ಕುರಿತು ಕ್ಲಾಸ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*