ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಜೂನ್ 23ರಂದು ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್. ಜಿ. ಎಸ್. ವೈ ಸಭಾಂಗಣದಲ್ಲಿ ಆಯೋಜಿಸಲಾದ ಪ್ರಾಕೃತಿಕ ವಿಕೋಪ ಮತ್ತು ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯನ್ನು ಹಠಾತ್ತನೆ ರದ್ದುಗೊಳಿಸಲಾಗಿದೆ.
ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ತಾಪಂ ನ ಕಚೇರಿ ಪ್ರಕಟಣೆ ತಿಳಿಸಿದೆ.
ಸಭೆ ನಿಗದಿ ಪಡಿಸಿದ ಕುರಿತ ಪ್ರಕಟಣೆ ತಾಲೂಕು ಪ್ರಭಾರ ತಹಶೀಲ್ದಾರರಿಂದ ಎಲ್ಲಾ ಇಲಾಖಾಧಿಕಾರಿಗಳಿಗೆ ರವಾನೆಯಾಗಿತ್ತು. ಇದಾದ ಬಳಿಕ ಮಧ್ಯಾಹ್ನದ ಹೊತ್ತಿಗೆ ಶಾಸಕರ ಹೆಸರನ್ನು ಸಭೆಗೆ ಆಹ್ವಾನಿಸಿರುವ ಪ್ರತ್ಯೇಕ ಸಭಾ ಕಲಾಪದ ನೊಟೀಸ್ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಸಹಿತ ಇಲಾಖಾಧಿಕಾರಿಯವರಿಗೆ ಈ ಮೇಲ್ ಮೂಲಕ ರವಾನೆಯಾಯಿತು. ಸಂಜೆಯ ವೇಳೆ ಹಠಾತ್ತನೆ ಈ ಸಭೆ ರದ್ದುಗೊಂಡಿರುವ ಕುರಿತ ಮತ್ತೊಂದು ನೊಟೀಸ್ ತಾಪಂ ಕಚೇರಿಯಿಂದ ರವಾನೆಯಾಗಿದೆ. ಬುಧವಾರ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ನಿಗದಿ ಪಡಿಸಿದ್ದರು. ಮೂರು ತಿಂಗಳಿನಿಂದ ವೇತನ ಸಿಗದೆ ಶಿಕ್ಷಕರು ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಶಿಕ್ಷಕರ ಮನವಿಯ ಮೇರೆಗೆ ಮತ್ತು ನೈನಾಡು ಕಾಲೇಜಿನ ಸಮಸ್ಯೆಯೊಂದನ್ನು ನಿವಾರಿಸುವ ನಿಟ್ಟಿನಲ್ಲಿ ತುರ್ತಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಶಾಸಕ ಬೆಂಗಳೂರಿಗೆ ತೆರಳಿದ್ದರಿಂದ ಅಂದಿನ ಈ ಸಭೆ ರದ್ದು ಪಡಿಸಲಾಗಿತ್ತು.
Be the first to comment on "ಪ್ರಾಕೃತಿಕ ವಿಕೋಪ, ಪ್ರಗತಿ ಪರಿಶೀಲನಾ ಸಭೆ ಮುಂದಕ್ಕೆ"