ಸಿಂಡಿಕೇಟ್ ಬ್ಯಾಂಕ್ ನ ಪಾಣೆಮಂಗಳೂರು ಶಾಖೆಗೊಳಪಟ್ಟ ಎಟಿಎಂ ಯಂತ್ರವನ್ನು ಜಖಂಗೊಳಿಸಿ ನಗದು ಕಳವಿಗೆ ಯತ್ನಿಸಿದ ಘಟನೆ ಗುರುವಾರ ನುಸುಕಿನ ಜಾವ ನಡೆದಿದೆ .
ಬೆಳಗ್ಗಿನ ಜಾವ 4 ಗಂಟೆಗೆ ಎಟಿಎಮ್ ನಲ್ಲಿ ಸೈರನ್ ಮೊಳಗುತ್ತಿರುವ ಬಗ್ಗೆ ಮಾಹಿತಿ ಪಡೆದ ಬ್ಯಾಂಕಿನ ಶಾಖಾ ಪ್ರಬಂಧಕ ಸ್ಥಳಕ್ಕಾಗಮಿಸಿದಾಗ ಎಟಿಎಮ್ ನ ರೂಮಿನ ಬಾಗಿಲು ತೆರೆದಿದ್ದು, ಬಳಿಕ ಪರಿಶೀಲಿಸಿದಾಗ ಎಟಿಎಂನ ಮೊನಿಟರ್ ಹಾಗೂ ಇತರ ಭಾಗಗಳು ಜಖಂ ಅಗಿತ್ತು . ಬಳಿಕ ಎಟಿಎಮ್ ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಆಯುಧದಿಂದ ಮೆಷಿನ್ ನನ್ನು ಜಖಂಗೊಳಿಸುವ ದೃಶ್ಯ ದಾಖಲಾಗಿದೆ. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ ಐ ಹರೀಶ್ ಮತ್ತವರ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎಟಿಎಮ್ ನಿಂದ ನಗದು ಅಗಲೀ ಇತರ ಯಾವುದೇ ಸೊತ್ತುಗಳು ಕಳವಾಗಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.
Be the first to comment on "ಎಟಿಎಂ ಜಖಂ, ಕಳವಿಗೆ ವಿಫಲ ಯತ್ನ"