ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಸರಕಾರಿ ಪ ಪೂ ಕಾಲೇಜಿನ ಎಲ್ಲ 6 ಉಪನ್ಯಾಸಕ ಹುದ್ದೆಗಳನ್ನು ಇತರ ಕಾಲೇಜುಗಳಿಗೆ ವರ್ಗಾಯಿಸಿದ್ದು ಕಾಲೇಜನ್ನು 2018-19 ಸಾಲಿನಲ್ಲಿ ಮುಂದುವರಿಸದಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ಸಂದರ್ಭ ಕ್ಷೇತ್ರದಲ್ಲಿ ಮುಂದಿನ ಅವಧಿಯಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಬಂಟ್ವಾಳದ ಪ್ರಸಕ್ತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು. ಶಾಸಕರ ಮಾತನ್ನು ಆಲಿಸಿದ ಸಿಎಂ, ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ, ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ಉದಯಕುಮಾರ್ ರಾವ್, ಚರಣ್ ಜುಮಾದಿಗುಡ್ಡೆ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ಸರ್ವಶಿಕ್ಷಣ ಅಭಿಯಾನದಲ್ಲಿ ಬರುವ ಶಿಕ್ಷಕರಿಗೆ ಮಾರ್ಚ್ ೨೦೧೮ರಿಂದ ಈ ತನಕ ವೇತನ ಪಾವತಿಯಾಗದ ಬಗ್ಗೆ ಇತ್ತೀಚೆಗೆ ಸರಕಾರಿ ಶಿಕ್ಷಕರ ಪ್ರೌಶಿಕ್ಷಕರ ಸಂಘ ತಾಲೂಕು ಘಟಕ ಇತ್ತೀಚೆಗೆ ಬಂಟ್ವಾಳ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿ ನಾನಾ ಸಮಸ್ಯೆಗಳ ಕುರಿತು ಮಾಹಿತಿ ನೀಡಿತ್ತು.
Be the first to comment on "ಕಾಲೇಜು ಸಮಸ್ಯೆ: ಸಿಎಂ ಭೇಟಿಯಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್"