ನರಿಕೊಂಬು ಗ್ರಾಮದ ಬೋಳಂತೂರು ಏರಮಲೆಯ ಭಗವಾನ್ ಶ್ರೀ ಕೋದಂಡರಾಮ ಭಜನಾ ಮಂದಿರ ಮತ್ತು ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಆಶ್ರಯದಲ್ಲಿ ವಿಶ್ವ ಯೋಗ ದಿನ ಆಚರಣೆ ಜೂನ್ 21ರಂದು ಬೆಳಗ್ಗೆ 5.15 ಕ್ಕೆ ಏರಮಲೆಯ ಸಮದಾಯ ಭವನದಲ್ಲಿ ನಡೆಯಲಿದೆ.
ಜಾಹೀರಾತು
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಸಮಾರಂಭವನ್ನು ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು ವಹಿಸುವರು. ಯೋಗ ಶಿಕ್ಷಕ ಸದಾಶಿವ ನಾಯಕ್ ಪ್ರಧಾನ ಉಪನ್ಯಾಸ ಮಾಡುವರು. ಯೋಗ ಶಿಕ್ಷಕ ಡಾ. ರಘುವೀರ ಅವಧಾನಿ, ಪತ್ರಕರ್ತರಾದ ರಾಜಾ ಬಂಟ್ವಾಳ, ಹರೀಶ ಮಾಂಬಾಡಿ, ಗ್ರಾಪಂ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ಮಾಧವ ಕರ್ಬೆಟ್ಟು, ರಾಜೀವಿ ಕೃಷ್ಣಪ್ಪ ಪೂಜಾರಿ, ತ್ರಿವೇಣಿ ಮೋನಪ್ಪ ಪೂಜಾರಿ ಉಪಸ್ಥಿತರಿರುವರು, 5.15 ರಿಂದ 5.45 ರವರೆಗೆ ನಿತ್ಯ ಯೋಗಾಭ್ಯಾಸಿಗಳಿಂದ ಸಾಮೂಹಿಕ ಯೋಗಾಭ್ಯಾಸ, 5.45 ರಿಂದ 6 ರವರೆಗೆ ಯೋಗಾಸನ ಪ್ರದರ್ಶನ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಏರಮಲೆಯಲ್ಲಿ 21ರಂದು ವಿಶ್ವ ಯೋಗದಿನಾಚರಣೆ, ಶಾಸಕ ರಾಜೇಶ್ ನಾಯ್ಕ್ ಭಾಗಿ"
Be the first to comment on "ಏರಮಲೆಯಲ್ಲಿ 21ರಂದು ವಿಶ್ವ ಯೋಗದಿನಾಚರಣೆ, ಶಾಸಕ ರಾಜೇಶ್ ನಾಯ್ಕ್ ಭಾಗಿ"