ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜ ಸೇವಾ ರೂಪವಾಗಿ ಶ್ರೀದೇವಿಗೆ ಸಮರ್ಪಿಸಿದ ನೂತನ ಧ್ವಜಸ್ತಂಭಕ್ಕೆ ತೈಲಾಧಿವಾಸ ಕಾರ್ಯಕ್ರಮ ಸೋಮವಾರ ಶ್ರೀಕ್ಷೇತ್ರದಲ್ಲಿ ನಡೆಯಿತು. ಸುರಿಯುವ ಮಳೆಯನ್ನು ಲೆಕ್ಕಿಸದೆ ಪೊಳಲಿ ಶ್ರೀ ಕ್ಷೇತ್ರದ ಸಾವಿರ ಸೀಮೆಗೊಳಪಟ್ಟ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಧ್ವಜಸ್ತಂಭಕ್ಕೆ ಶುದ್ದ ಎಳ್ಳೆಣ್ಣೆ ಸಮರ್ಪಿಸಿ ಪುನೀತರಾದರು.
ಮುಂದಿನ ಆರು ತಿಂಗಳವರಗೆ ಭಕ್ತರಿಗೆ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಿಸಲು ಅವಕಾಶವಿದೆ, ಕ್ಷೇತ್ರದಲ್ಲಿ ಲಭ್ಯವಿರುವ ಶುದ್ದ ಎಳ್ಳೆಣ್ಣೆಯನ್ನು ಸೇವಾ ಕೌಂಟರಿನಲ್ಲಿ ರಶೀದು ಪಡೆದು ಬೆಳಿಗ್ಗೆ 8ರಿಂದ ಮಧ್ಯಾಹ್ನ1 ಗಂಟೆಯವರೆಗೆ, ಸಂಜೆ ಗಂಟೆ 4 ರಿಂದ 7 ಗಂಟೆಯವರೆಗೆ ಎಳ್ಳೆಣ್ಣೆ ಸಮರ್ಪಿಸಬಹುದಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಮರದ ಶಿಲ್ಪಿಗಳಾದ ಬಿ.ಬಾಲಕೃಷ್ಣ ಆಚಾರ್ಯ ಹರೇಕಳ ಇವರಿಂದ ಧ್ವಜಸ್ತಂಭದ ಮರದ ಕೆತ್ತನೆ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು ಕ್ಷೇತ್ರದ ಅಧಿದೇವತೆ ಶ್ರೀ ರಾಜರಾಜೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಕೊಡಿಮರಕ್ಕೆ ಎಳ್ಳೆಣ್ಣೆ ಸಮರ್ಪಿಸಲಾಯಿತು.
ಈ ಸಂದರ್ಭ ಕ್ಷೇತ್ರದ ಆಡಳಿತ ಟ್ರಸ್ಟಿ ತಾರಾನಾಥ ಆಳ್ವ, ಶಾಸಕ ರಾಜೇಶ್ ನಾಯ್ಕ್ ಯು, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಕೃಷ್ಣಕುಮಾರ್ ಪೂಂಜಾ, ರಾಜ್ ಮಾರ್ಲ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಪ್ರಧಾನ ಅರ್ಚಕ ಮಾಧವ ಭಟ್, ಅರ್ಚಕರಾದ ರಾಮ ಭಟ್, ನಾರಾಯಣ ಭಟ್, ಸುಬ್ರಹ್ಮಣ್ಯ ತಂತ್ರಿ, ಮಾಧವ ಮಯ್ಯ, ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್, ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಪ್ರ.ಕಾರ್ಯದರ್ಶಿ ಪುರುಷ ಎನ್ ಸಾಲಿಯಾನ್ ನೆತ್ರೆಕೆರೆ, ಭುವನೇಶ್ ಪಚ್ಚಿನಡ್ಕ, ಯಶವಂತ ಪೊಳಲಿ, ಬಳ್ಳಿ ಚಂದ್ರಶೇಖರ್ ಕೈಕಂಬ, ನಾರಾಯಣ ಅಮ್ಮುಂಜೆ, ಉಮೇಶ್ ಪೂಜಾರಿ ಬಾರಿಂಜ, ಗೋಪಾಲಕೃಷ್ಣ ಕೈಕಂಬ, ಗಂಗಾಧರ ಪೂಜಾರಿ ಕೊಪ್ಪಳ, ರಾಜು ಕೋಟ್ಯಾನ್, ಸದಾಶಿವ ಕಾಜಿಲ, ರಾಮಪ್ಪ ಪೂಜಾರಿ ಬಡಕಬೈಲು, ಚರಣ್ ಬಡಕಬೈಲು, ದೀಪಕ್ ಕೋಟ್ಯಾನ್, ವೆಂಕಟೇಶ್ ನಾವುಡ, ಸುಬ್ರಾಯ ಕಾರಂತ, ಸಂಪತ್ ಕುಮಾರ್ ಶೆಟ್ಟಿ, ಅಣ್ಣು ಭಂಡಾರಿ ಮತ್ತಿತರರು ಹಾಜರಿದ್ದರು.
Be the first to comment on "ಸುರಿವ ಮಳೆ ಲೆಕ್ಕಿಸದೆ ನಡೆಯಿತು ಪೊಳಲಿ ನೂತನ ಧ್ವಜಸ್ತಂಭಕ್ಕೆ ತೈಲಾಧಿವಾಸ"