ದಕ್ಷಿಣ ಭಾರತದ ಸುಪ್ರಸಿದ್ಧ ಝಿಯಾರತ್ ಕೇಂದ್ರವಾದ ಮಡವೂರು ಸಿ.ಎಂ ಮಖಾಂ ಶರೀಫ್ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಸಿ.ಎಂ ಮಹಮ್ಮದ್ ಅಬೂಬಕ್ಕರ್ ಮುಸ್ಲಿಯಾರ್ ರವರ 28ನೇ ಉರೂಸ್ ಮುಬಾರಕ್ ಜೂನ್ 18ರಿಂದ 23ರ ವರೆಗೆ ನಡೆಯಲಿದೆ ಎಂದು ಅನಿಲಕಟ್ಟೆ ಮಡವೂರು ಸಿ.ಎಂ ಮಖಾಂ ಯತೀಂಖಾನ ಎಜುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ನ ಕನ್ವೀನರ್ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ತಿಳಿಸಿದರು.
ಅವರು ವಿಟ್ಲದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಉರೂಸ್ ಪ್ರಯುಕ್ತ ವಿವಿಧ ದಿನಾಂಕಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಖಾಂ ಝಿಯಾರತ್, ಧ್ವಜಾರೋಹಣ, ಸಿ.ಎಂ ಅನುಸ್ಮರಣ ಸಮ್ಮೇಳನ, ಮತ ಪ್ರಭಾಷಣ, ಮಜ್ಲಿಸುನ್ನೂರು, ಸನದುದಾನ ಸಮ್ಮೇಳನ, ಸ್ವಲಾತ್ ಮಜ್ಲೀಸ್, ದ್ಸಿಕ್ರ್ ದುಃಆ, ಅನ್ನದಾನ ಮುಂತಾದ ಕಾರ್ಯಕ್ರಮಗಳೊಂದಿಗೆ ಅತೀ ವಿಜೃಂಭಣೆಯಿಂದ ಆಚರಿಸಲ್ಪಡುವ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಪ್ರತಿನಿಧಿಗಳಾಗಿ ಕುನ್ನುಂಗೈ ತಂಙಳ್, ಮಿತ್ತಬೈಲು ಉಸ್ತಾದ್, ಮಂಗಳೂರು ಖಾಝಿ ತ್ವಾಖಾ ಉಸ್ತಾದ್, ಕುಕ್ಕಾಜೆ ತಂಙಳ್, ಕಿನ್ಯ ತಂಙಳ್, ಹಬೀಬು ತಂಙಳ್, ಉದ್ಯಾವರ ತಂಙಳ್, ಕಿನ್ಯ ದಾರಿಮಿ, ರೆಂಜಲಾಡಿ ದಾರಿಮಿ ಹಾಗೂ ಇನ್ನಿತರ ಉಲಮಾ ಉಮರಾ ರಾಜಕೀಯ ನೇತಾರರು, ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಹುಸೈನ್ ಬಾಲವಿ ತಂಙಳ್ ಕುಕ್ಕಾಜೆ, ಪಿ.ಎ ಮೊಹಮ್ಮದ್ ಮುಸ್ಲಿಯಾರ್, ಕೆ.ಎ ಹಸೈನಾರ್ ಮುಸ್ಲಿಯಾರ್, ಅಬೂಬಕ್ಕರ್ ಮಂಗಳಪದವು, ಅಬೂಬಕ್ಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.
Be the first to comment on "28ನೇ ಉರೂಸ್ ಮುಬಾರಕ್ ಜೂನ್ 18ರಿಂದ 23ರ ವರೆಗೆ"