ವ್ಯಾಪಾರಸ್ಥರ ಮೇಲೆ ದಂಡ ಹಾಕುವ ಬದಲು ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳನ್ನು ಬಂದ್ ಮಾಡಿ ಪ್ಲಾಸ್ಟಿಕ್ ಮುಕ್ತ ಮಾಡಿರಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಅಂಗಡಿ ಮಾಲೀಕರು ಮನವಿ ಮಾಡಿದ್ದಾರೆ.
ಭವಿಷ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ನಿಷೇಧ ಕಾರ್ಯಚರಣೆ ಅಗತ್ಯವಾಗಿದ್ದು ಪುರಸಭೆಯ ಕಾರ್ಯ ಸ್ವಾಗತಾರ್ಹ. ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ನೀಡಬಾರದು ಎನ್ನುವ ಪುರಸಭೆ ಅನಿವಾರ್ಯವಾಗಿ ಮಾರಾಟ ಮಾಡುವ ವ್ಯಾಪಾರಿಗಳ ಮೇಲೆ ದಂಡ ವಿಸುವುದು ರಿಯಲ್ಲ. ಪ್ಲಾಸ್ಟಿಕ್ ಚೀಲ ತಯಾರಾಗದೇ ಇದ್ದರೆ ನಾವು ಗ್ರಾಹಕರಿಗೆ ನೀಡುವ ಸಂಭವವೇ ಇರುವುದಿಲ್ಲ. ಕಾರ್ಯಚರಣೆಯ ವೇಳೆ ದಿನವೊಂದಕ್ಕೆ ಐನ್ನೂರರಿಂದ ಒಂದು ಸಾವಿರ ರುಪಾಯಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗೆ 5 ಸಾವಿರ ರೂಪಾಯಿ ದಂಡ ಹಾಕುವುದು ನ್ಯಾಯಸಮ್ಮತವಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ವ್ಯಾಪಾರಿಗಳ ಮನವಿಗೆ ಸ್ಪಂದಿಸಿದ ರೇಖಾ ಶೆಟ್ಟಿ ಪ್ಲಾಸ್ಟಿಕ್ ನಿಷೇಧ ಕಾರ್ಯಚರಣೆ ನ್ಯಾಯಾಲಯದ ಆದೇಶವಾಗಿದ್ದು ಈ ಬಗ್ಗೆ ವ್ಯಾಪಾರಿಗಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.
ಈ ಸಂದರ್ಭ ಬಂಟ್ವಾಳದ ವ್ಯಾಪಾರಿಗಳಾದ ಪ್ರಕಾಶ್ ಅಂಚನ್, ಮಹಾಬಲ ಬಂಗೇರ, ಅಬ್ದುಲ್ ಕಯ್ಯಾಂ, ಬಾಲಕೃಷ್ಣ ಪೂಜಾರಿ, ಸದಾಶಿವ ಭಂಡಾರಿ, ಭಾಸ್ಕರ ಪೂಜಾರಿ, ಮಹಮ್ಮದ್ ಸಮೀರ್ ಮತ್ತಿತರರು ಹಾಜರಿದ್ದರು.
ಇಲ್ಲಿನ ಪುರಸಭೆ ವ್ಯಾಪ್ತಿಯ ಬಡ್ಡಕಟ್ಟೆ ಹಾಗೂ ಬಂಟ್ವಾಳ ಪೇಟೆ ಪರಿಸರದ ಅಂಗಡಿಗಳಲ್ಲಿ ಪುರಸಭಾ ಅಕಾರಿಗಳು ಬುಧವಾರ ಕಾರ್ಯಚರಣೆ ನಡೆಸಿ ಪ್ಲಾಸ್ಟಿಕ್ ಕೈ ಚೀಲಗಳನ್ನು ವಶಪಡಿಸಿಕೊಂಡಿದ್ದರು.
Be the first to comment on "ಪರ್ಯಾಯ ವ್ಯವಸ್ಥೆ ಕಲ್ಪಿಸದೆ ದಾಳಿ ಸಲ್ಲದು: ವ್ಯಾಪಾರಿಗಳ ಮನವಿ"