ವಿವಿಧ ಕಾರಣಗಳಿಗಾಗಿ ಕೆಲವು ಮಕ್ಕಳು ಬಾಲ್ಯದಲ್ಲೇ ಕಾರ್ಮಿಕರಾಗಿಬಿಟ್ಟಿರುತ್ತಾರೆ. ಅಂಥವರು ತಮ್ಮ ಅವಕಾಶಗಳಿಂದ ವಂಚಿತರಾಗುತ್ತಾರೆ. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕಾಗಿದೆ ಎಂದು ಅಡ್ಯನಡ್ಕ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್ ನಾಯ್ಕ್ ಹೇಳಿದರು.
ಜೂ. 12ರಂದು ಅಡ್ಯನಡ್ಕ ಜನತಾ ಪ್ರೌಢಶಾಲೆಯ ಸಮಾಜ ವಿಜ್ಞಾನ ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಬಾಲಕಾರ್ಮಿಕ ವಿರೋಧಿ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ವಿಜ್ಞಾನ ಸಂಘದ ಮಾರ್ಗದರ್ಶಿ ಶಿಕ್ಷಕ ಎಸ್.ರಾಜಗೋಪಾಲ ಜೋಶಿ ಅವರ ಮಾರ್ಗದರ್ಶನದಲ್ಲಿ ‘ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು’ ಎಂಬ ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಿತು. ವಿದ್ಯಾರ್ಥಿಗಳಾದ ಮಹೇಶ, ಪ್ರಜ್ವಲ್, ಮಹಮ್ಮದ್ ರಾಫಿ, ಪ್ರಸಾದ್, ಚರಣ್, ಗಿರೀಶ, ಡೀಪ್ನ ಡಿಸೋಜ, ಜೀವನ್ಯಾ, ಪಂಚಮಿ, ಶ್ರಾವ್ಯ, ರಝಾನ ಪಾಲ್ಗೊಂಡರು.
ಸಮಾಜ ವಿಜ್ಞಾನ ಸಂಘದ ಅಧ್ಯಕ್ಷ ಮಹೇಶ್ ಸ್ವಾಗತಿಸಿ, ಡೀಪ್ನ ಡಿಸೋಜ ವಂದಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಅಡ್ಯನಡ್ಕ: ಬಾಲಕಾರ್ಮಿಕ ವಿರೋಧಿ ದಿನಾಚರಣೆ"