ವಿಶೇಷ ವರದಿ

ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲೀಗ ಮಕ್ಕಳ ಕಲರವ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

 

ಜಾಹೀರಾತು

ಉತ್ತಮ ಕಲಿಕಾ ವ್ಯವಸ್ಥೆ, ಪರಿಸರ ಪರ ಕಾಳಜಿಯನ್ನು ಮೈಗೂಡಿಸುವಂತೆ ಮಾಡುವ ಶಿಕ್ಷಕ ವೃಂದ, ಕಳೆದ ವರ್ಷ ಆರಂಭಗೊಂಡ ಪೂರ್ವಪ್ರಾಥಮಿಕ ಶಿಕ್ಷಣ (ಎಲ್.ಕೆ.ಜಿ., ಯುಕೆಜಿ), ಕನ್ನಡವಷ್ಟೇ ಅಲ್ಲ, ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಸ್ಪೋಕನ್ ಇಂಗ್ಲೀಷ್ ಮತ್ತು ಬರೆಯುವ ಆಂಗ್ಲ ಭಾಷೆಯ ಶಿಕ್ಷಣವನ್ನು ಮಾತೃಭಾಷೆಯ ಜೊತೆಜೊತೆಗೆ ವಿಶೇಷವಾಗಿ ನೀಡುವ ವ್ಯವಸ್ಥೆ ಇದ್ದರೆ ಸರಕಾರಿ ಶಾಲೆಗೆ ಮಕ್ಕಳು ಬರ್ತಾರೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ.
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಸೇರ್ಪಡೆಯಾದ ಮಕ್ಕಳ ಸಂಖ್ಯೆ 23.

ಕಳೆದ ವರ್ಷಕ್ಕೆ ಹೋಲಿಸಿದರೆ ಇದು ನಾಲ್ಕು ಪಟ್ಟು ಹೆಚ್ಚು. ಕಳೆದೆರಡು ವರ್ಷಗಳಲ್ಲಿ ೮ ಹಾಗೂ ೧೦ ಮಕ್ಕಳಷ್ಟೇ ಹೊಸದಾಗಿ ಸೇರ್ಪಡೆ ಆಗಿದ್ದರು. ಆದರೆ ಈ ವರ್ಷ ೩೨ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಒಟ್ಟು 124 ಮಕ್ಕಳು ಈ ಶಾಲೆಯಲ್ಲೀಗ ಕಲಿಯುತ್ತಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಎಸ್.ಕೆ. ಮಾಹಿತಿ ನೀಡಿದರು.

ಶಾಲೆಗೆ ಸಂತೋಷ್ ಶೆಟ್ಟಿ ಅರೆಬೆಟ್ಟು ಅವರು ಮಾತಾ ಡೆವಲಪರ್‍ಸ್ ನ ಪ್ರಾಯೋಜಕತ್ವದಲ್ಲಿ ನಾಲ್ಕು ಶಿಕ್ಷಕಿಯರು ಮತ್ತು ೧ ಸಹಾಯಕಿಯನ್ನು ಒದಗಿಸಿದ್ದರೆ, ನುರಿತ ಶಿಕ್ಷಕರ ತಂಡ ೧೨೪ ಮಕ್ಕಳ ವೈಯಕ್ತಿಕ ಕಾಳಜಿಯನ್ನು ನೋಡುವಷ್ಟರ ಮಟ್ಟಿಗೆ ಪಾಠ ಮಾಡುತ್ತಿದ್ದಾರೆ. ಬಂಟ್ವಾಳ ತಾಲೂಕು ಫೊಟೋಗ್ರಾಫರ್‍ಸ್ ಅಸೋಸಿಯೇಶನ್, ಶಾಲಾಭಿವೃದ್ಧಿ ಸಮಿತಿ ಸಹಿತ ನಾನಾ ಸಂಘ, ಸಂಸ್ಥೆಗಳು ಶಾಲೆಗೆ ನೆರವಾಗುತ್ತಿವೆ. ಲಾರ್ಸನ್ ಆಂಡ್ ಟಾರ್ಬೋ (ಎಲ್.ಆಂಡ್ ಟಿ) ಕಂಪನಿಯವರ ಸಾಮಾಜಿಕ ಸೇವಾ ವಿಭಾಗದ ವತಿಯಿಂದ ಸೌರವಿದ್ಯುತ್, ಶೌಚಾಲಯ, ಕೈತೋಟ ಹೀಗೆ ಸರಕಾರಿ ಶಾಲೆ ಅಭಿವೃದ್ಧಿಯ ಪಥದತ್ತ ಸಾಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.