ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ್ದೇ ಸುದ್ದಿ. ಅದರ ಬಳಕೆ ಕುರಿತು ಗೊಂದಲ, ಸಂಶಯಗಳು ಬೇರೆ. ಇದನ್ನು ನಿವಾರಿಸಲು ಎಳವೆಯಲ್ಲೇ ಪ್ರಯಯ್ನಿಸಿದರೆ ಹೇಗೆ. ಇಲ್ಲಿದೆ ನೋಡಿ ಈ ಶಾಲೆಯ ಚುನಾವಣೆಯ ವರದಿ.
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಚುನಾವಣೆ ನಡೆಯಿತು. 10 ನೇ ತರಗತಿಯ ವಿಜೇತ್.ಕೆ.ಎಂ ನಾಯಕನಾಗಿ ಹಾಗೂ ೯ ನೇ ತರಗತಿಯ ದೀಪಾಲಿ ಎಂ.ಎಸ್. ಉಪನಾಯಕಿಯಾಗಿ ಬಹುಮತದಿಂದ ಆಯ್ಕೆಗೊಂಡರು.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಯೋಗಿಕ ಅರಿವು ಮೂಡಿಸುವ ಹಿನ್ನಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಿಕೊಂಡು ವಿದ್ಯಾರ್ಥಿ ನಾಯಕರ ಆಯ್ಕೆಗೆ ಚುನಾವಣೆ ನಡೆಸಲಾಯಿತು.
ಮತಯಂತ್ರದ ಬಳಕೆ, ಅಭ್ಯರ್ಥಿಗಳಿಗೆ ಚಿಹ್ನೆ ನೀಡಿಕೆ , ಚುನಾವಣಾ ಅಧಿಕಾರಿಗಳ ವಿಶೇಷ ನಿಗಾ ವ್ಯವಸ್ಥೆ, ಮತಗಟ್ಟೆ ಅಧಿಕಾರಿಗಳು , ಮೇಲ್ವಿಚಾರಕರು , ಮತದಾರರಿಂದ ಮತದಾನ , ಮತಎಣಿಕೆ , ವಿಜೇತ ಅಭ್ಯರ್ಥಿಗಳ ಘೋಷಣೆ, ಹೀಗೆ ಎಲ್ಲವೂ ಶಿಸ್ತುಬದ್ಧವಾಗಿ ನಡೆಯಿತು. ಮುಖ್ಯ ಚುನಾವಣಾಧಿಕಾರಿಯಾಗಿ ಸಿ.ಶ್ರೀಧರ್ , ಚುನಾವಣಾ ಅಧಿಕಾರಿಗಳಾಗಿ ವಿಜಯಲಕ್ಷ್ಮೀ .ವಿ.ಶೆಟ್ಟಿ , ಹಾಗೂ ಗ್ರೇಸ್.ಪಿ.ಸಲ್ಡಾನಾ ಕಾರ್ಯ ನಿರ್ವಹಿಸಿದರು.
ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಯಜ್ಞೇಶ್ವರಿ ಎಸ್.ಶೆಟ್ಟಿ, ಮಂಜುಳಾ ಎಚ್.ಗೌಡ, ಶುಭಾ ಕೆ , ರಶ್ಮಿ ಫೆರ್ನಾಂಡಿಸ್, ಲೀಲಾ , ಆಶಾಲತಾ ಹಾಗೂ ಹರಿಣಾಕ್ಷಿ ಕಾರ್ಯ ನಿರ್ವಹಿಸಿದರು. ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಮಾರ್ಗದರ್ಶನ ನೀಡಿದರು.
Be the first to comment on "ಮಕ್ಕಳ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರ"