ನಾನು ಯಾವುದೇ ದ್ವೇಷದ ರಾಜಕಾರಣ ಮಾಡುವುದಿಲ್ಲ. ರಾಜಧರ್ಮ ಪಾಲಿಸುತ್ತೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದ್ದಾರೆ.
ಬಂಟ್ವಾಳ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಾಣೆಮಂಗಳೂರು ಸುಮಂಗಲ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆದ ಸಂದರ್ಭ ಅವರು ಮಾತನಾಡಿ ನಾನು ಯಾವುದೇ ದ್ವೇಷದ ರಾಜಕಾರಣ ಮಾಡದೇ ರಾಜಧರ್ಮ ಪಾಲಿಸುವುದಾಗಿ ಹೇಳಿದರಲ್ಲದೆ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತೇನೆ ಎಂದು ಹೇಳಿದರು. ರಾತ್ರಿ ಹಗಲೆನ್ನದೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.
ಜಿಲ್ಲಾ ಬಿಜೆಪಿ ವಕ್ತಾರರಾದ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ದೇಶದ ಜನ ಮೆಚ್ಚಿದ ನಾಯಕ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ನನಸು ಮಾಡಲು ಕಾರ್ಯಕರ್ತರು ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ಅತೀ ಹೆಚ್ಚು ಮತಗಳ ಮುನ್ನಡೆಯನ್ನು ಗಳಿಸಿದ ನರಿಕೊಂಬು ಮತ್ತು ಶಂಭೂರು ಗ್ರಾಮದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಕಾರ್ಯಕರ್ತರು ಇನ್ನಷ್ಟು ಶ್ರಮ ಪಟ್ಟಲ್ಲಿ ನರೇಂದ್ರ ಮೋದೀಜಿಯವರ ಕಾಂಗ್ರೆಸ್ ಮುಕ್ತ ಪಂಚಾಯತ್ ಆಗಲು ಹೆಚ್ಚು ಸಮಯ ಬೇಕಾಗಿಲ್ಲ ಎಂದರು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ನರಿಕೊಂಬು ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಮಾಣಿಮಜಲು, ಸ್ಥಳೀಯ ಪ್ರಮುಖರಾದ ಪದ್ಮನಾಭ ಮಯ್ಯ ಏಲಬೆ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಯಶವಂತ ಪೊಳಲಿ, ಮೋಹನ ಪಿ. ಎಸ್., ಪ್ರಭಾಕರ ಪ್ರಭು, ರಂಜಿತ್ ಮೈರಾ, ಕೇಶವ ಪಿ. ಹೆಚ್., ರಾಜಾರಾಮ್ ನಾಯಕ್, ಪಾಂಡುರಂಗ ಪ್ರಭು, ರೋಹಿತ್ ಮರ್ದೋಳಿ, ಜನಾರ್ಧನ ಕುಲಾಲ್, ರಮಾನಾಥ ರಾಯಿ ಹಾಗೂ ಪಂಚಾಯತ್ ಸದಸ್ಯರು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು ಸ್ವಾಗತಿಸಿದರು, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆನಂದ ಶಂಭೂರು ಪ್ರಸ್ತಾವನೆಗೈದು ವಸಂತ ಭಿಮಗದ್ದೆ ವಂದಿಸಿದರು. ಸುರೇಶ್ ಕೋಟ್ಯಾನ್ ಮತ್ತು ಕೇಶವ ಬಿ. ನಿರೂಪಿಸಿದರು.
Be the first to comment on "ದ್ವೇಷದ ರಾಜಕಾರಣ ಮಾಡೋಲ್ಲ, ಎಲ್ಲರನ್ನೂ ಪ್ರೀತಿವಿಶ್ವಾಸದಿಂದ ಕಾಣುವೆ: ರಾಜೇಶ್ ನಾಯ್ಕ್"