ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಜೂನ್ 2ರ ಶನಿವಾರ ಬಂಟ್ವಾಳದಲ್ಲಿ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ. ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾಂಗ್ರೆಸ್ ನ ರಮಾನಾಥ ರೈ ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡ್ ಪಕ್ಷದ ಕಚೇರಿಯಿಂದ ಗಾಣದಪಡ್ಪು, ಬಂಟ್ವಾಳನೆರೆ ವಿಮೋಚನಾ ರಸ್ತೆ, ಬಂಟ್ವಾಳ ಪೇಟೆ, ಬಡ್ಡಕಟ್ಟೆ, ಜಕ್ರಿಬೆಟ್ಟು ಮೂಲಕ ಬೈಪಾಸ್ ರಾಮನಗರ ಜಂಕ್ಷನ್ ವರೆಗೆ ವಿಜಯೋತ್ಸವ ಮೆರವಣಿಗೆಯು ನಡೆಯುವುದು. ಕಾರ್ಯಕ್ರಮದಲ್ಲಿ ಪಕ್ಷದ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
Be the first to comment on "ಶನಿವಾರ ಬಂಟ್ವಾಳದಲ್ಲಿ ಬಿಜೆಪಿ ವಿಜಯೋತ್ಸವ"