ಕುಲಾಲ ಸೇವಾ ಸಂಘ ತುಂಬೆ ಇದರ 4ನೇ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ತುಂಬೆ ರಾಮನಗರ (ರಾಮಲ್ ಕಟ್ಟೆ) ಶಾರದಾ ಸಭಾ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಲಿಂಗಪ್ಪ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಜೀವಾವಿಮಾ ನಿಗಮ ಕಾರ್ಕಳ ಶಾಖೆಯ ಉಪಶಾಖಾಧಿಕಾರಿ ಸೋಮಸುಂದರ್ ಕೆ. ಮಾತನಾಡುತ್ತಾ ನಾವು ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ನಮ್ಮ ಸಂಸ್ಕೃತಿ , ನಡೆನುಡಿಯನ್ನು ಪಾಲಿಸುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಯಲಕ್ಷ್ಮೀ.ಎಸ್.ಬಂಗೇರ ಸಂಘದವರು ಉಚಿತವಾಗಿ ನೀಡಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಸಿಆರ್‌ಪಿಎಫ್ ನಿವೃತ್ತ ಯೋಧ ಓ.ಆರ್.ಮಾಯಿಲಪ್ಪ ಸಂಪಾಜೆ, ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು ದ.ಕ.ಜಿಲ್ಲೆ ಇದರ ಉಪಾಧ್ಯಕ್ಷರಾದ ಶೇಷಪ್ಪ ಮಾಸ್ತರ್, ಸಂಘದ ಗೌರವಾಧ್ಯಕ್ಷ ನೀಲಪ್ಪ ಸಾಲಿಯಾನ್ ಉಪಸ್ಥಿತರಿದ್ದರು. ಸಂದೀಪ್ ಕುಲಾಲ್ ವರದಿ ವಾಚಿಸಿದರು. ಖಜಾಂಚಿ ಹರೀಶ್ ಪೆರ್ಲಬೈಲು ಸ್ವಾಗತಿಸಿದರು. ಕಾರ್ಯದರ್ಶಿ ಭಾಸ್ಕರ್ ಕುಲಾಲ್ ವಂದಿಸಿದರು. ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಮಹಿಳಾ ಘಟಕವನ್ನು ಸ್ಥಾಪಿಸಲಾಯಿತು.
Be the first to comment on "ತುಂಬೆ ಕುಲಾಲ ಸೇವಾ ಸಂಘ ವಾರ್ಷಿಕೋತ್ಸವ"