ಕಲ್ಲಡ್ಕದಲ್ಲಿರುವ ಶ್ರೀರಾಮ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿಕ್ಷಣವೆಂದರೆ ಕೇವಲ ಪುಸ್ತಕದ ಓದಿಗೆ ಸೀಮಿತವಲ್ಲ. ಬದಲಾಗಿ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಪ್ರತಿಕ್ಷಣವೂ ಉತ್ತಮ ಅಂಶಗಳನ್ನು ಗುರುತಿಸಿ ಅಳವಡಿಸಿಕೊಳ್ಳಬೇಕು. ವಿದ್ಯೆಯ ಅಪೇಕ್ಷೆ ಬೆಳೆಸಿಕೊಂಡು ಸಂಸ್ಕಾರದ ಜೊತೆಗೆ ಉತ್ತಮ ಅಂಕ ಪಡೆದು ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹಿರಿಯರಿಂದ ತಿಲಕಧಾರಣೆ ಆಶೀರ್ವಾದ ಪಡೆದರು.
ಸಹಸಂಚಾಲಕ ರಮೇಶ್ ಎನ್. ಅರುಣ್ ಭಟ್, ಶಿಶುಮಂದಿರ ಮುಖ್ಯ ಶಿಕ್ಷಕಿ ಗಂಗಾ, ಪ್ರೌಢಶಾಲಾ ವಿಭಾಗದ ವಸಂತಿ ಉಪಸ್ಥಿತರಿದ್ದರು.
ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಸುಧಾಂಶು ಸ್ವಾಗತಿಸಿದರು. ರಕ್ಷಾ ವಂದಿಸಿದರು.
Be the first to comment on "ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಪ್ರಾರಂಭೋತ್ಸವ"