ರೈತರ ಸಾಲ ಮನ್ನಾ ಆಗ್ರಹಿಸಿ ಬಂದ್‌ಗೆ ಬಂಟ್ವಾಳ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲ್ಲಡ್ಕ, ಸಿದ್ಧಕಟ್ಟೆ, ಬಂಟ್ವಾಳ ಪೇಟೆಯಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಹೊರತುಪಡಿಸಿದರೆ, ತಾಲೂಕಿನ ಪ್ರಮುಖ ವ್ಯವಹಾರ ಕೇಂದ್ರವಾದ ಬಿ.ಸಿ.ರೋಡ್ ನಲ್ಲಿ ಎಂದಿನಂತೆಯೇ ಚಟುವಟಿಕೆಗಳು ಇದ್ದವು.
ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತರು ಬೆಳಗ್ಗಿನ ಹೊತ್ತು ಅಂಗಡಿಮುಂಗಟ್ಟು ಮುಚ್ಚಿ ಸಹಕರಿಸುವಂತೆ ಮನವಿ ಮಾಡಿದ್ದು ಬಹುತೇಕ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಏರು ಹೊತ್ತಿನ ಬಳಿಕ ವ್ಯವಹಾರ ನಡೆದವು. ಕಲ್ಲಡ್ಕ ಪೇಟೆಯಲ್ಲಿ ಕೆಲವು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಯಿತು. ಎಂದಿನಂತೆ ವ್ಯವಹಾರ ಕಲ್ಲಡ್ಕದಲ್ಲಿ ಕಂಡುಬರಲಿಲ್ಲ. ಆದರೆ ವಾಹನ ಸಂಚಾರಕ್ಕೆ ಅಡ್ಡಿಯಾಗಲಿಲ್ಲ. ಮಾಣಿ, ಫರಂಗಿಪೇಟೆ, ಪಾಣೆಮಂಗಳೂರು, ಮೆಲ್ಕಾರ್, ಸಜೀಪ, ಮಂಚಿ, ಸಾಲೆತ್ತೂರು ಸಹಿತ ಇತರ ಪ್ರಮುಖ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟು ತೆರೆದಿದ್ದವು.
Photos and video: S.R. Kaikamba
video:
https://www.youtube.com/watch?v=MUFoplfMSjg
Be the first to comment on "ಎಂದಿನಂತೆ ನಡೆಯಿತು ಬಂಟ್ವಾಳ ತಾಲೂಕಿನ ಚಟುವಟಿಕೆ"