ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಮಹೇಶ್ ಕರ್ಜಗಿ ಅವರ ಅಧ್ಯಕ್ಷತೆಯಲ್ಲಿ ಮಳೆಗಾಲದ ಪೂರ್ವಸಿದ್ದತಾ ಸಭೆ ಬಂಟ್ವಾಳ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ನದಿತೀರದ ಆಯಕಟ್ಟಿನ ಪ್ರದೇಶ, ತಗ್ಗು ಪ್ರದೇಶಗಳಿಗೆ ವಿಶೇಷ ನಿಗಾ ವಹಿಸುವಂತೆ ಸೂಚನೆ ನೀಡಲಾಯಿತು. ತಾಲೂಕಿನಲ್ಲಿ ದಿನದ 24 ಗಂಟೆ ಕಾರ್ಯಾಚರಣೆ ಮಾಡಲು ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಕಲ್ಪಿಸುವುದಾಗಿ ಎ.ಸಿ. ಮಹೇಶ್ ಕರ್ಜಗಿ ಅವರು ತಿಳಿಸಿದರು.
ನದಿತೀರ ಪ್ರದೇಶದಲ್ಲಿರುವ ಶಾಲೆ, ಅಂಗನವಾಡಿಗಳಿಗೆ ವಿಶೇಷ ನಿಗಾ ವಹಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು.
ನದಿತೀರದ ಆಯಕಟ್ಟಿನ ಪ್ರದೇಶಗಳಲ್ಲಿರುವ ನಾಡ ದೋಣಿಗಾರರು, ಈಜುಗಾರರನ್ನು ತಂಡವನ್ನು ರಚಿಸಿ ಅವರ ಸಹಾಯ ಪಡೆಯುವ ಬಗ್ಗೆ ನಿರ್ಧರಿಸಲಾಯಿತು.
ಪ್ರಾಕೃತಿಕ ವಿಕೋಪದಿಂದ ಸಂಭವಿಸಬಹುದಾದ ಭೂ ಕುಸಿತ, ರಸ್ತೆ ಅಡಚಣೆ, ನದಿ ಕೊರತ ಮತ್ತಿತರ ಇತ್ಯಾದಿ ಮಾಹಿತಿಗಳನ್ನು ತಕ್ಷಣ ನೀಡಬೇಕಾಗಿ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ತಾಲೂಕು, ಹೋಬಳಿ, ಗ್ರಾಮ ಮಟ್ಟದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಂಡು, ಅಗತ್ಯ ಸ್ಥಳಗಳಲ್ಲಿ ಗಂಜಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕಾಗಿ ನಿರ್ದೇಶನ ನೀಡಲಾಯಿತು.
ಬಂಟ್ವಾಳ ತಹಶೀಲ್ದಾರ್ ವೈ.ರವಿ, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು, ಉಪ ತಹಶೀಲ್ದಾರರು, ಹೋಬಳಿ ಮಟ್ಟದ ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಸಭೆಯಲ್ಲಿ ಭಾಗವಹಿಸಿದರು.
Be the first to comment on "ಪ್ರಾಕೃತಿಕ ವಿಕೋಪ: ಮುನ್ನೆಚ್ಚರಿಕಾ ತಯಾರಿ ಸಭೆ"