ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ 2018-19ರ ಸಾಲಿನ ನೂತನ ಅಧ್ಯಕ್ಷರಾಗಿ ಡಿ.ಎಂ.ಕುಲಾಲ್ ಸರ್ವಾನುಮತದಿಂದ ಆಯ್ಕೆಯಾದರು.
ಇವರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದಲ್ಲಿ ಕಳೆದ 32 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಹಲವಾರು ಹುದ್ದೆಯನ್ನು ನಿರ್ವಹಿಸಿ, ಪತ್ರಕರ್ತರಾಗಿ ಲೇಖಕರಾಗಿ. ಸಮಾಜ ಸೇವಕರಾಗಿ ಸೇವೆಗೈದವರು. ಕೀರ್ತಿಶೇಷ ದಿ.ಅಮ್ಮೆಂಬಳ ಬಾಳಪ್ಪ. ದಿ.ಹೂವಯ್ಯ ಮೂಲ್ಯರವರ ಗರಡಿಯಲ್ಲಿ ಪಳಗಿದವರು.
ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರಾಗಿ 1989ರಿಂದ ನಿರಂತರ ಸೇವೆ ಸಲ್ಲಿಸುತ್ತಾ 1990ರಲ್ಲಿ ಬಂಟ್ವಾಳ ತಾಲೂಕು ಯುವಜನ ಒಕ್ಕೂಟದ ಸ್ಥಾಪಕ ಕಾರ್ಯದರ್ಶಿಯಾಗಿ. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕರಾಗಿ ಸಂಘವನ್ನು ಕಟ್ಟಿ ಬೆಳೆಸಿದವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾಗಿ ಬಂಟ್ವಾಳ ತುಳುಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.
1990ರಲ್ಲಿ ಮೀಸಲಾತಿಯ ಬಗ್ಗೆ ಪುಸ್ತಕ ಹಾಗೂ ಇತರೆ ವಿಷಯ ಕುರಿತು ಈ ವರೆಗೆ 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಉಪಾಧ್ಯಕ್ಷರಾಗಿ ಕೃಷ್ಣಶ್ಯಾಂ ಬಿ.ಸಿ.ರೋಡು, ಕಾರ್ಯದರ್ಶಿಯಾಗಿ ಮಾಧವ ಕುಲಾಲ್ ಬಿ.ಸಿ.ರೋಡು, ಕೋಶಾಧಿಕಾರಿಯಾಗಿ ಲಿಂಗಪ್ಪ ಮಾಸ್ತರ್ ಪೊಸಳ್ಳಿ, ಜತೆಕಾರ್ಯದರ್ಶಿಯಾಗಿ ಪದ್ಮನಾಭ ಅಲೆತ್ತೂರು, ರಮೇಶ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿಯಾಗಿ ಯಾದವ ಕುಲಾಲ್, ಕ್ರೀಡಾಕಾರ್ಯದರ್ಶಿಯಾಗಿ ಜಯರಾಜ್ ಬಂಗೇರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೇಶವ ಮಾಸ್ತರ್ ಮಾರ್ನಬೈಲು, ಜಲಜಾಕ್ಷಿ ಪಾಣೆಮಂಗಳೂರು, ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಮಿತಾ ಅಲೆತ್ತೂರು ಆಯ್ಕೆಯಾಗಿದ್ದಾರೆ.
Be the first to comment on "ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ ಡಿ.ಎಂ. ಕುಲಾಲ್ ಆಯ್ಕೆ"