www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ರಾಜ್ಯ ವಿಧಾನಸಭಾ ಚುನಾವಣೆಯ ನಾಮಪತ್ರ ಪರಿಶೀಲನೆ ಬುಧವಾರ ನಡೆದಿದ್ದು, ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 8 ಮಂದಿಯ 13 ನಾಮಪತ್ರಗಳ ಪೈಕಿ ಎರಡು ತಿರಸ್ಕೃತಗೊಂಡಿವೆ.
ಜೆಡಿಎಸ್ ಅಭ್ಯರ್ಥಿಯಾಗಿದ್ದ ಇಬ್ರಾಹಿಂ ಕೈಲಾರ್ ಹಾಗೂ ಬಿಜೆಪಿಯ ಡಮ್ಮಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತುಂಗಪ್ಪ ಬಂಗೇರ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು ಉಳಿದಂತೆ ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿದೆ ಎಂದು ಬಂಟ್ವಾಳ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಯಾರೆಲ್ಲ ನಾಮಪತ್ರ ಸಲ್ಲಿಸಿದ್ದರು?
ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ, ಬಿಜೆಪಿಯ ಯು.ರಾಜೇಶ್ ನಾಯ್ಕ್ (ಎರಡು ಸೆಟ್), ಎಂಇಪಿಯ ಶಮೀರ್, ಬಿಜೆಪಿಯ ತುಂಗಪ್ಪ ಬಂಗೇರ, ಎಸ್ಡಿಪಿಐನ ರಿಯಾಜ್ (ಎರಡು ಸೆಟ್), ಅಬ್ದುಲ್ ಮಜೀದ್ (ಎರಡು ಸೆಟ್), ಇಬ್ರಾಹಿಂ ಕೈಲಾರ್ (ಜೆಡಿಎಸ್ ಮತ್ತು ಪಕ್ಷೇತರ), ಬಾಲಕೃಷ್ಣ ಪೂಜಾರಿ (ಜೆಡಿಯು ಮತ್ತು ಲೋಕಸೇವಾದಳ) ಹೀಗೆ ಒಟ್ಟು 8 ಮಂದಿ 13 ನಾಮಪತ್ರಗಳನ್ನು ಸಲ್ಲಿಸಿದ್ದರು.
ಈ ಪೈಕಿ ತುಂಗಪ್ಪ ಬಂಗೇರ ಮತ್ತು ಇಬ್ರಾಹಿಂ ಕೈಲಾರ್ ಅವರು ಜೆಡಿಎಸ್ ಎಂದು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡಿವೆ. ಈಗ 7 ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ನಾಮಪತ್ರ ಹಿಂತೆಗೆಯಲು ಕೊನೆಯ ದಿನ.
ವೀಕ್ಷಕರ ನಿಯೋಜನೆ:
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಪ್ರಕ್ರಿಯೆಯ ಮೇಲುಸ್ತುವಾರಿಯಾಗಿ ವಿಕಾಸ್ ಯಾದವ್ ಐಎಎಸ್ ,ಮೊಬೈಲ್ ಸಂಖ್ಯೆ : 8277807205 ಹಾಗೂ ಸಮನ್ವಯ ಅಧಿಕಾರಿಯಾಗಿ ಜೋಯಿ ಪ್ರದೀಪ್ ಡಿಸೋಜ ಮೊಬೈಲ್ ಸಂಖ್ಯೆ -9448206393 ಅವರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿದೆ.ಚುನಾವಣಾ ಸಂಬಂಧ ದೂರುಗಳಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು ಎಂದು ಬಂಟ್ವಾಳ ಕ್ಷೇತ್ರ ಚುನಾವಣಾಧಿಕಾರಿಯ ಪ್ರಕಟಣೆ ತಿಳಿಸಿದೆ.
Be the first to comment on "ಬಂಟ್ವಾಳ ಕ್ಷೇತ್ರ: 2 ನಾಮಪತ್ರ ತಿರಸ್ಕೃತ"